(www.vknews.in) ; ಬಸವರಾಜ ಶಂಕರ ಉಮ್ರಾಣಿ ಅವರು ಬೆಳಗಾವಿಯ ಅಥಣಿಯಲ್ಲಿ ಬಿ.ಎಡ್ ಮತ್ತು ಪೋಸ್ಟ್ ಗ್ರ್ಯಾಜುಯೆಟ್ ಮಾಡಿದ್ದಾರೆ. ಹುಟ್ಟಿನಿಂದಲೂ ಸಂಪೂರ್ಣ ಕುರುಡನಾದ ಬಸವರಾಜನು ಬಾಹ್ಯ ಪ್ರಪಂಚವನ್ನು ಎಂದಿಗೂ ನೋಡಲಿಲ್ಲ, ಆದರೆ ಅವರ ಮನಸ್ಸು ಯಾವುದೇ ಸಾಮಾನ್ಯ ವ್ಯಕ್ತಿಗೆ ಗ್ರಹಿಸಲಾಗದ ವಿಷಯಗಳನ್ನು ನೋಡುತ್ತದೆ ಮತ್ತು ಅರ್ಥೈಸುತ್ತದೆ. ಅವರು ಅಪ್ರತಿಮ ಸಾಮರ್ಥ್ಯದ ಮೆದುಳನ್ನು ಉಡುಗೊರೆಯಾಗಿ ಹೊಂದಿದ್ದಾರೆ, ದುಬೈಗೆ ಅವರ ಇತ್ತೀಚಿನ ಭೇಟಿಯಲ್ಲಿ ಕನ್ನಡಿಗರು ದುಬೈ ಸಂಘದ ವತಿಯಿಂದ ವತಿಯಿಂದ ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದಿರುವ ಅಂಧ ಪ್ರತಿಭೆ ಬಸವರಾಜ್ ಉಮ್ರಾಣಿ ಅವರನ್ನು ಫೆಬ್ರವರಿ 5ರಂದು ಶಾರ್ಜಾದಲ್ಲಿ ಸಮಸ್ತ ಯುಎಇ ಕನ್ನಡಿಗರ ಪರವಾಗಿ ಸನ್ಮಾನಿಸಲಾಯಿತು.
ಸರಳ ಸಮಾರಂಭ ಕಾರ್ಯಕ್ರಮದಲ್ಲಿ ಕನ್ನಡಿಗರು ದುಬೈ ಅಧ್ಯಕ್ಷರಾದ ಸದನ್ ದಾಸ್, ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಮಂಡ್ಯ, ಮುಖ್ಯ ಕಾರ್ಯದರ್ಶಿ ಅರುಣ್ ಬೆಂಗಳೂರು, ಸಮಿತಿ ಸದಸ್ಯರುಗಳಾದ ಕಾಮತ್, ವಿನೀತ್ ಮತ್ತು ಇತರ ಕನ್ನಡ ಕುಟುಂಬದವರು ಉಪಸ್ಥಿತರಿದ್ದರು.
ಬಸವರಾಜ್ ಉಮ್ರಾಣಿ ಅವರು ಕೆಲವು ವರ್ಷಗಳ ಹಿಂದೆ ದುಬೈ ಪೋಲೀಸರ ಅತಿಥಿಯಾಗಿ ದುಬೈ ಪೋಲೀಸರ ಮುಖ್ಯ ಕಛೇರಿಯಲ್ಲಿ ಸಂವಾದ ಕಾರ್ಯಕ್ರಮ ನೀಡಿದ್ದು ಉಮ್ರಾಣಿ ಅವರ ಪ್ರತಿಭೆಯನ್ನು ನೋಡಿ ದುಬೈ ಪೊಲೀಸರು ಆಶರ್ಯಗೊಂಡಿದ್ದರು ಮತ್ತು ಪೊಲೀಸ್ ಸಂಸ್ಥೆ ವತಿಯಿಂದ ಸನ್ಮಾನವನ್ನು ಮಾಡಿದ್ದರು ಹಾಗೇ ದುಬೈಯ ಅರಬಿಕ್ ನ್ಯೂಸ್ ವಾಹಿನಿಯಲ್ಲಿ ಸಂದರ್ಶನ ಸಹ ನೀಡಿದ್ದರು. ಉಮ್ರಾಣಿಯವರನ್ನು ಸನ್ಮಾನಿಸದ್ದು ಕನ್ನಡಿಗರು ದುಬೈ ತಂಡದ ಪಾಲಿಗೆ ಸಂತಸದ ಮತ್ತು ಹೆಮ್ಮೆಯ ಕ್ಷಣಗಳು ಎಂದು ಸದನ್ ದಾಸ್ ಅವರು ನುಡಿದರು.
ವರದಿ : ರಫೀಕಲಿ ದುಬೈ ಕನ್ನಡಿಗ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.