(www.vknews.in) ದಕ್ಷಿಣ ಕನ್ನಡ ಎಸ್ಡಿಎಂಸಿ ಸಮನ್ವಯ ವೇದಿಕೆಯ ವತಿಯಿಂದ ನಡೆಯುವ ಎಸ್ಡಿಎಂಸಿ ಜಿಲ್ಲಾ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮದ ಬಿರುಸಿನ ಪ್ರಚಾರ ಹಾಗೂ ಅತಿಥಿಗಳನ್ನು ಆಹ್ವಾನಿಸುವ ಕಾರ್ಯವು ನಡೆಯುತ್ತ ಇದೆ. ಇಂದು ಬಂಟ್ವಾಳ ತಾಲೂಕಿನಲ್ಲಿ ಮಾಜಿ ಸಚಿವರು,ದ.ಕ ಜಿಲ್ಲಾ ಉಸ್ತುವಾರಿ ಗಳಾದ ರಮಾನಾಥ್ ರೈ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ರವರ ಕಚೇರಿ, ಮತ್ತು ಸಾಮಾಜಿಕ ಮುಂದಾಳು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕುಲಾಲು ಸುಭಾಷ್ ಶೆಟ್ಟಿ ಯವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ನಿಯೋಗದಲ್ಲಿ ಮೊಯಿದಿನ್ ಕುಟ್ಟಿ ಎಸ್ಡಿಎಂಸಿ ಸಮನ್ವಯ ವೇದಿಕೆ,ಉಮ್ಮರ್ ಫಾರೂಕ್ ಜಿಲ್ಲಾ ಉಪಾಧ್ಯಕ್ಷರು ಎಸ್ಡಿಎಂಸಿ ಸಮನ್ವಯ ವೇದಿಕೆ, ಹಸೈನಾರ್ ತಾಲಿತ್ತನೂಜಿ, ಮಹಮ್ಮದ್ ಪುಚ್ಚಮೋಗರು ಎಸ್ಡಿಎಂಸಿ ಅದ್ಯಕ್ಷರು ಮೂಡಬಿದ್ರಿ ತಾಲೂಕು ಮತ್ತು ಮೊಯಿದಿನ್ ಪುಚ್ಚಮೋಗರು ರವರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.