(www.vknews.in) ; ಸೌದಿ ಅರೇಬಿಯಾದ ರಿಯಾದ್ ನಲ್ಲಿ ಉದ್ಯೊಗದಲ್ಲಿರುವ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿಯ ನಿವಾಸಿಗಳು ತಮ್ಮ ಊರಿನಲ್ಲಿರುವ ಬಡವರ ಸಹಾಯಕ್ಕಾಗಿ ಸಂಘಟಿಸಿದ ಸಂಘಟನೆಯೆ ‘ಪಾಟ್ರಕೋಡಿ ರಿಯಾದ್ ಯುನಿಟ್” ಎಂಬ ಸಂಘಟನೆ, ಈ ಸಂಘಟನೆಯ ಮೂಲಕ ಈ ಸಂಘಟನೆಯ ಸದಸ್ಯರು ಹಲವಾರು ಸಮಾಜಸೇವೆಗಳನ್ನು ಮಾಡುವ ಮೂಲಕ ಹಲವರು ಊರ ಜನರ ಕಷ್ಟಕ್ಕೆ ಸ್ಪಂದಿಸುವ ಪುಣ್ಯ ಕಾರ್ಯವನ್ನು ಮಾಡಿರುತ್ತಾರೆ.
ಈ ಸಂಘಟನೆಯು ಸರಿ ಸುಮಾರು ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದು ಈ ಸಂಘಟನೆಯ ವಾರ್ಷಿಕ ಮಹಾಸಭೆಯ ಸೌದಿ ಅರೇಬಿಯಾದ ರಿಯಾದ್ ನಲ್ಲಿ ತುಪೈಲ್ ಪಾಟ್ರಕೋಡಿರವರ ಅಧ್ಯಕ್ಷತೆಯಲ್ಲಿ ಜರುಗಿತ್ತು ಈ ಸಭೆಯಲ್ಲಿ 2023-24 ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷ ಇಬ್ರಾಹಿಮ್ (ಇಬ್ಬ) ಕರಿಮಜಲು, ಉಪಾಧ್ಯಕ್ಷ ತುಪೈಲ್ ಪಾಟ್ರಕೋಡಿ, ಪ್ರಧಾನ ಕಾರ್ಯದರ್ಶಿ ಶರೀಪ್ ಕುದ್ದುಂಬ್ಲಾಡಿ, ಜೊತೆ ಕಾರ್ಯದರ್ಶಿ ಪರ್ವೆಝ್ ಪಿ, ಕೋಶಾಧಿಕಾರಿ ಝಿಯಾದ್ ಪಿ, ಸಲಹೆಗಾರ ಉನೈಸ್ ಪಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಇಬ್ಬ ಕುದ್ದುಂಬ್ಲಾಡಿ, ಖಾಸೀಂ ಮಿತ್ತಪಡ್ಪು, ನಾಸೀರ್ ಬಿ ಎಚ್, ಸಿನಾನ್, ಚಿನ್ನು, ಸೀದ್ದಿಕ್ ರೊಯಲ್ ಮನ್ಸೂರ್ ಮಿತ್ತಪಡ್ಪುಜನನ ರವರನ್ನು ಆಯ್ಕೆಮಾಡಲಾಯಿತು.
ವರದಿ ; ಅಬ್ದುಲ್ ಖಾದರ್ ಪಾಟ್ರಕೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.