ಮಂಗಳೂರು (www.vknews.in) : ವಿಟ್ಲ ಕಡಾಂಬು ಎಂಬಲ್ಲಿ 2 ಕೋಮುಗಳ ಜನರು ಅಕ್ರಮ ಗುಂಪು ಸೇರಿ ಪೊಲೀಸರಿಗೆ ಹಲ್ಲೆ ನಡೆಸಿ ಕೊಲ್ಲಲು ಪ್ರಯತ್ನಪಟ್ಟಿದ್ದು ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಎಂಬುದಾಗಿ 25-01-2019 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಲ್ಲಾ ಆರೋಪಿತರನ್ನು ಖುಲಾಸೆಗೊಳಿಸಿ ಸೋಮವಾರ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ. ಆರೋಪಿ ಸಂಖ್ಯೆ 12 ರಿಂದ 22 ಆರೋಪಿತರ ಪರವಾಗಿ ನ್ಯಾಯಾಲಯದಲ್ಲಿ ವಕೀಲರಾದ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರಿನ ವಕೀಲರಾದ ಉಮರ್ ಫಾರೂಕ್ ಮುಲ್ಕಿ, ಹೈದರ್ ಅಲಿ ಕಿನ್ನಿಗೋಳಿ, ಇಝಜ್ ಅಹಮದ್ ಉಳ್ಳಾಲ,ಕೆ ಮುಫೀದಾ ರಹಿಮಾನ್, ನಿರೀಕ್ಷಾ, ಇರ್ಷಾದ್ ಮೊಂಟೆಪದವು, ವಾದಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.