ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ 60 ಸ್ಥಳಗಳಲ್ಲಿ ಶೋಧ ನಡೆಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಉಕ್ಕಡಂ ಪ್ರದೇಶದ ಕೊಟ್ಟಾಯಿಮೇಡುವಿನ ಕೊಟ್ಟಾಯಿ ಈಶ್ವರನ್ ದೇವಸ್ಥಾನದ ಮುಂದೆ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಶಂಕಿತ ಉಗ್ರ ಜೇಮ್ಶಾ ಮುಬೀನ್ ಸಾವನ್ನಪ್ಪಿದ್ದರು.
ದೀಪಾವಳಿ ಆಚರಣೆಗೆ ಒಂದು ದಿನ ಮೊದಲು ನಡೆದ ಈ ಸ್ಫೋಟವನ್ನು ‘ಲೋನ್ ವುಲ್ಫ್’ ದಾಳಿ ಎಂದು ಕರೆಯಲಾಗಿದೆ. ಮುಬೀನ್ನಿಂದ 75 ಕೆಜಿ ಸ್ಫೋಟಕಗಳು, ಐಸಿಸ್ ಧ್ವಜದ ರೇಖಾಚಿತ್ರ ಸೇರಿದಂತೆ ದಾಖಲೆಗಳು ನಗರ ಪೊಲೀಸರು ವಶಪಡಿಸಿಕೊಂಡಿದ್ದರು. ಇ-ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಸ್ಫೋಟಕಗಳನ್ನು ಖರೀದಿಸಲು ಮತ್ತು ಬಾಡಿಗೆ ಮನೆಯಿಂದ ಮತ್ತೊಂದು ಮನೆಗೆ ಕರೆದೊಯ್ಯಲು ಮುಬೀನ್ ಗೆ ಸಹಾಯ ಮಾಡಿದ ಆರು ಜನರನ್ನು ಪೊಲೀಸರು ಬಂಧಿಸಿದ್ದರು.
ಕೊಯಮತ್ತೂರು ಸ್ಫೋಟದ ರೂವಾರಿ ಜೇಮ್ಶಾ ಮುಬೀನ್ ಮತ್ತು ಮಂಗಳೂರು ಸ್ಫೋಟದಲ್ಲಿ ಭಾಗಿಯಾಗಿದ್ದ ಶಾರಿಕ್ ಜತೆ ನಂಟು ಹೊಂದಿದವರ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. 60 ಸ್ಥಳಗಳಲ್ಲಿ ಅವರ ಮನೆಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಮಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಕೊಚ್ಚಿಯಲ್ಲಿ ದಾಳಿ ನಡೆಯುತ್ತಿದೆ. ಸ್ಫೋಟಕ್ಕೆ ಸ್ವಲ್ಪ ಮೊದಲು ಮಂಗಳೂರಿನಿಂದ ಕೇರಳಕ್ಕೆ ಬಂದಿದ್ದ ಶರೀಕ್ ಅಲ್ಲಿಯೇ ಉಳಿದುಕೊಂಡಿದ್ದ ಎಂದು ತಿಳಿದುಬಂದಿದೆ. ಸಹಾಯ ಮಾಡಿದವರ ಮೇಲೆ ತನಿಖೆ ನಡೆಯುತ್ತಿದೆ.
ಚೆನ್ನೈನ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಮನ್ನಾಡಿ ಮತ್ತು ಕೊಡಂಗಯೂರ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅಕ್ಟೋಬರ್ 23 ರ ಮುಂಜಾನೆ ಕೊಯಮತ್ತೂರಿನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.