ಗೋವಾ (ವಿಶ್ವ ಕನ್ನಡಿಗ ನ್ಯೂಸ್) : ಮನೆಯವರಿಗೆ ಹೇಳದೆ ಪ್ರೇಮಿಗಳ ದಿನ ಆಚರಿಸಲು ಗೋವಾಕ್ಕೆ ತೆರಳಿದ್ದ ಯುವಕ ಹಾಗೂ ಯುವತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ವಿಭು ಶರ್ಮಾ (27) ಮತ್ತು ಸುಪ್ರಿಯಾ ದುಬೆ (26) ಎಂದು ಗುರುತಿಸಲಾಗಿದೆ. ಗೋವಾದ ಪಲೋಲಂ ಬೀಚ್ ನಲ್ಲಿ ಮಂಗಳವಾರ ಸಂಜೆ ಈ ದಾರುಣ ಘಟನೆ ನಡೆದಿದೆ.
ಸುಪ್ರಿಯಾ ಶವ ಸಮುದ್ರತೀರದಲ್ಲಿ ಕೊಚ್ಚಿಕೊಂಡು ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲೈಫ್ ಗಾರ್ಡ್ ಸಹಾಯದಿಂದ ಮೃತದೇಹವನ್ನು ದಡಕ್ಕೆ ತಂದರು. ನಂತರ ವಿಭುವಿನ ಮೃತ ದೇಹವೂ ಪತ್ತೆಯಾಗಿತ್ತು. ಇಬ್ಬರನ್ನೂ ಕೊಂಕಣ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಕೊಂಕಣ ಪೊಲೀಸರ ಪ್ರಕಾರ, ಸುಪ್ರಿಯಾ ಮತ್ತು ವಿಭು ವಿಹಾರಕ್ಕೆಂದು ಗೋವಾದಲ್ಲಿದ್ದರು. ಸುಪ್ರಿಯಾ ಬೆಂಗಳೂರಿನಲ್ಲಿ ಮತ್ತು ವಿಭು ದೆಹಲಿಯಲ್ಲಿ ವಾಸಿಸುತ್ತಿದ್ದರು. ಇವರಿಬ್ಬರು ಸಂಬಂಧಿಕರಾಗಿದ್ದು, ಗೋವಾದಲ್ಲಿ ಇರುವುದು ಮನೆಯವರಿಗೆ ಗೊತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಇಬ್ಬರೂ ಗೋವಾದಲ್ಲಿದ್ದರು. ಸೋಮವಾರ ರಾತ್ರಿ ಪಲೋಲಂ ಬೀಚ್ ಬಳಿ ಕಾಣಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಪಘಾತ ಹೇಗೆ ಸಂಭವಿಸಿತು ಎಂಬುದು ಸೇರಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ನಡೆಸುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.