ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಬಹುಮಹಡಿ ಕಟ್ಟಡದ ಮೇಲಿನಿಂದ ಕಲ್ಲುಗಳು ಬಿದ್ದು ಇಬ್ಬರು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಕೇಂದ್ರ ಮುಂಬೈನ ವರ್ಲಿ ಪ್ರದೇಶದಲ್ಲಿ ರಾತ್ರಿ 9.40 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ಸಬೀರ್ ಅಲಿ (36) ಮತ್ತು ಇಮ್ರಾನ್ ಅಲಿ (30) ಎಂದು ಗುರುತಿಸಲಾಗಿದೆ. ಇಬ್ಬರೂ ಕಾರ್ಮಿಕರು.
ಅಧಿಕಾರಿಗಳ ಪ್ರಕಾರ, ಗಾಂಧಿ ನಗರ ಪ್ರದೇಶದ 43 ಅಂತಸ್ತಿನ ಫೋರ್ ಸೀಸನ್ಸ್ ರೆಸಿಡೆನ್ಸಿಯಲ್ಲಿ ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ ಕಲ್ಲುಗಳು 42 ನೇ ಮಹಡಿಯಿಂದ ಬಿದ್ದಿವೆ. ಆಂಬ್ಯುಲೆನ್ಸ್ ಮತ್ತು ವೈದ್ಯರು ಸ್ಥಳಕ್ಕೆ ತಲುಪುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು.
ಮೃತರಿಬ್ಬರು ಫೋರ್ ಸೀಸನ್ಸ್ ಹೋಟೆಲ್ ಎದುರಿನ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಮಂಗಳವಾರ ರಾತ್ರಿ ಚಹಾ ಕುಡಿಯಲು ಬಂದಾಗ ಅಪಘಾತಕ್ಕೆ ಒಳಗಾದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.