ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಪುತ್ತೂರಿನ ಹಿರಿಯ ವಕೀಲರೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ನಗರದ ಎಪಿಎಂಸಿ ರಸ್ತೆ ನೆಲ್ಲಿಕಟ್ಟೆ ನಿವಾಸಿ, ಪುತ್ತೂರಿನ ಹಿರಿಯ ನ್ಯಾಯವಾದಿ ಕೆ.ಪಿ.ಜೇಮ್ಸ್ ಮೃತಪಟ್ಟವರು.
ಮೃತರು ಫೆ.15ರ ತಡ ರಾತ್ರಿ ತನ್ನ ಪತ್ನಿ ಜೊತೆ ತಮಿಳುನಾಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಹವಾನಿಯಂತ್ರಿತ ಕೋಚ್ನಲ್ಲಿದ್ದ ಜೇಮ್ಸ್ ಅವರು ರಾತ್ರಿ ವೇಳೆ ಶೌಚಾಲಯಕ್ಕೆಂದು ಹೋದವರು ಹೃದಯಾಘಾತಕ್ಕೊಳಗಾಗಿ ರೈಲಿನಿಂದ ಬಿದ್ದಿದ್ದಾರೆ. ಇವರ ಪತ್ನಿ ಗಂಡ ಶೌಚಾಲಯಕ್ಕೆ ಹೋದವರು ಬಾರದೆ ಇರುವುದನ್ನು ನೋಡಲು ಹೋದಾಗ ಗಂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಕಿರುಚಾಡಿದಾಗ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದಿದ್ದಾರೆ ಎಂದು ರೈಲಿನಲ್ಲಿದ್ದ ಉಳಿದವರ ತಿಳಿಸಿದ್ದಾರೆ.
ತಕ್ಕೇರಿ ಬಳಿಯ ಧರ್ಮಡಮ್ ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಮೃತ ದೇಹ ಪತ್ತೆ ಮಾಡಿದ ರೈಲ್ವೇ ಪೊಲೀಸರು ತನ್ನೇರಿಯ ಆಸ್ಪತ್ರೆಯ ಶವಾಗರ ಕೊಠಡಿಯಲ್ಲಿ ಇರಿಸಿದ್ದರು. ಕೆ.ಪಿ ಜೇಮ್ಸ್ ಅವರ ಪತ್ನಿ ಕೂಡಾ ತಲ್ವೇರಿಯಲ್ಲಿ ನನ್ನ ಗಂಡ ರೈಲಿನಲ್ಲಿ ನಾಪತ್ತೆಯಾಗಿರುವ ಕುರಿತು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿಗೆ ಸಂಬಂಧಿಸಿ ರೈಲ್ವೇ ಪೊಲೀಸರು ಪತ್ತೆಯಾದ ಮೃತ ದೇಹವನ್ನು ಪರಿಶೀಲಿಸಿ ಮೃತ ದೇಹದ ಜೊತೆಯಲ್ಲಿದ್ದ ವಕೀಲ ಸದಸ್ಯತ್ವದ ಗುರುತು ಚೀಟಿ ಮತ್ತು ಭಾವಚಿತ್ರ ಆಧಾರಿಸಿ ಮೃತ ದೇಹ ಕೆ.ಪಿ. ಜೇಮ್ಸ್ ಅವರದ್ದು ಎಂದು ಖಚಿತ ಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.