(www.vknews.in) : ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಹತ್ತಿರ ಬಂದಿದೆ. ಈಗ ನಮ್ಮ ಮಕ್ಕಳ ಬದುಕಿಗಾಗಿ ನಾವು ತ್ಯಾಗ ಸಹಿಸ ಬೇಕಾಗಿದೆ. ಅದಕ್ಕಾಗಿ ಮದುವೆ, ಬಿರ್ಂದ್ ಸೇರಿದಂತೆ ಉರೂಸ್, ವಿನೋದ ಮತ್ತು ಝಿಯಾರತ್ ಟೂರ್ ಗಳನ್ನೂ ಹೆತ್ತವರು ಉಪೇಕ್ಷಿಸಬೇಕು.
ಪರೀಕ್ಷೆ ಮಕ್ಕಳಿಗಲ್ಲವೇ? ಅವರು ಓದಿಕೊಳ್ಳಲಿ, ನಾವು ಹೋಗಿ ಬರುವ ಎನ್ನುವ ಹೆತ್ತವರಿದ್ದಾರೆ, ಇದು ನಿಮ್ಮ ಮಕ್ಕಳನ್ನು ನೀವು ಇನ್ನಷ್ಟೂ ಅಸಾಹಯಕರನ್ನಾಗಿಸುವ ಉದ್ದೇಶವಾಗಿದೆ. ಈಗ ನೀವು ಅವರ ಜೊತೆ ನಿಂತು ದೈರ್ಯ ಮತ್ತು ಸ್ಪೂರ್ತಿ ತುಂಬಬೇಕಾಗಿದೆ ಎಂದು ಕಲ್ಲೆಗ ಜುಮ್ಮಾ ಮಸೀದಿಯ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು. ಅವರಿಂದು ಜುಮ್ಮಾ ನಮಾಝ್ ನಂತರ ಉಪದೇಶ ನೀಡುತ್ತಾ, ಮದರಸದಲ್ಲೂ ಪರೀಕ್ಷೆ ನಡೆಯುತ್ತಿದೆ. ಮಕ್ಕಳ ಮೆದುಳಿನಲ್ಲಿ ಈಗ ಕಲಿಕೆಯ ಹೊರತಾದ ಏನೂ ನುಸುಳದಂತೆ ಹೆತ್ತವರು ಎಚ್ಚರಿಕೆ ವಹಿಸಬೇಕು. ಅವರೊಂದಿಗೆ ಸಂಜೆ ಮತ್ತು ಬೆಳಿಗ್ಗೆ ಒಂದಿಷ್ಟು ತಾಸು ಕಳೆದು ಅವರನ್ನು ಹುರಿದುಂಬಿಸಬೇಕು ಎಂದವರು ಹೇಳಿದರು.
ನಮಗೆ ಭವಿಷ್ಯ ಬೇಕಲ್ಲವೇ ? ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳ ಬದುಕು ಉತ್ತಮವಾಗಬೇಕಲ್ಲವೇ ? ಅದಕ್ಕಾಗಿ ತ್ಯಾಗ ಸಹಿಸುವುದು, ಶ್ರಮ ವಹಿಸುವುದು ಮಕ್ಕಳಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಹೆತ್ತವರಿಗೂ ಇದೆ. ನೀವು ಮಕ್ಕಳ ನೆಗೆಟಿವ್ ಹೇಳುವುದು, ಅವರ ದೂರುಗಳನ್ನು ಹೇಳುವುದು, ಅವರಿಂದ ಏನೂ ಪ್ರಯೋಜನವಿಲ್ಲಾ ಎನ್ನುವುದನ್ನು ನಿಲ್ಲಿಸಿ ಅವರ ಕಷ್ಟ – ಸುಖವನ್ನು ಕೇಳುತ್ತಾ, ಅವರ ಅಗತ್ಯತೆ ಮತ್ತು ಕನಸುಗಳನ್ನು ಅರ್ಥ ಮಾಡುತ್ತಾ ಅವರೊಂದಿಗೆ ಗೆಳೆತನ ಮಾಡಿಕೊಳ್ಳಬೇಕಿದೆ. ಕಡೆಮೆ ಎಂದರೆ ದಿನಕ್ಕೆ ಅರ್ಧ ತಾಸು ಅವರೊಂದಿಗೆ ಕಳೆಯಬೇಕಿದೆ. ಅವರಿಗೆ ಸ್ಪೂರ್ತಿ ತುಂಬ ಬೇಕು. ಕಲಿಕಾ ಕೊರತೆಗಳನ್ನು ನೀಗಿಸಬೇಕು, ಅದಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಿ ಕೊಡಬೇಕು.
ಮಕ್ಕಳ ಬದುಕು ನಿಮ್ಮ ಆಸ್ತಿ, ಅದನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಲು ಆಗದೇ ಇದ್ದರೆ ನಮ್ಮಲ್ಲಿ ಎಲ್ಲವೂ ಇದ್ದು ಪ್ರಯೋಜನವಿಲ್ಲ ಎಂದ ಖತೀಬರು, ಮಕ್ಕಳಿಗೆ ಈಗ ಪ್ರೀತಿ, ಆತ್ಮೀಯತೆ ಮತ್ತು ಅಪ್ಪುಗೆ ಬೇಕಾಗಿದೆ. ಅದನ್ನು ನೀಡುವುದು ಹೆತ್ತವರ ಕರ್ತವ್ಯ ಎಂದರು.
ಇಂದಿನಿಂದ ಪ್ರತೀ ಹೆತ್ತವರು ಎಲ್ಲಾ ಕಾರ್ಯಕ್ರಮಕ್ಕೆ ವಿರಾಮ ಹಾಕಿ ಮಕ್ಕಳ ಪರೀಕ್ಷೆ ತಯಾರಿಗೆ ಅವರೊಂದಿಗೆ ಸೇರಿಕೊಳ್ಳಬೇಕು. ಅವರಿಗೆ ಬೇಕಾದ ಈಝಿ ಸ್ಟಡೀ ಮೆಥೆಡ್, ಸಬ್ಜೆಕ್ಟ್ ಟ್ಯೂಷನ್ ನೀಡಬೇಕು. ಹೆತ್ತವರು, ವಿದ್ಯಾವಂತ ಸಹೋದರರು ಪಿಯುಸಿ, ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಬೆಕು. ಇನ್ನೇನೋ ರಮಾಳಾನ್ ಕೂಡ ಬರುತ್ತದೆ
ಈಗಿಂದೀಗಲೇ ಶಿಸ್ತು ಮತ್ತು ನೀತಿ ಪಾಲಿಸಿದರೆ ಬದುಕು ಬಹಳ ಸುಂದರವಾಗಬಹುದು. ಕ್ಷಣಿಕ ಸಂತೋಷಕ್ಕೆ ಭವಿಷ್ಯದ ದೊಡ್ಡ ಸಮಯಗಳು ಪಶ್ಚಾತಾಪ ಪಡುವಂತೆ ಮಾಡಬೇಡಿ ಎಂದ ಖತೀಬರು ಪ್ರತೀ ಹೆತ್ತವರು ಈ ದಿನವೇ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀಡಿದೆವು ಎನ್ನುವ ಸಂಕಲ್ಪ ಮಾಡಿ, ಅವರೊಂದಿಗೆ ಬೆರೆಯಬೇಕು. ಶೈತಾನನ ಪ್ರೇರಣೆ ಎಷ್ಟೇ ಪ್ರಬಲವಾಗಿದ್ದರೂ ದೃತಿಗೆಡದೆ ನಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ಸಮುದಾಯದಲ್ಲಿ ಶೈಕ್ಷಣಿಕ ಶಿಸ್ತಿಗೆ ಸಹಕರಿಸಿರಿ ಎಂದು ಖತೀಬರು ಕರೆ ನೀಡಿದರು.
ಹನೀಫ್ ಪುತ್ತೂರು ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.