ಪುತ್ತೂರು (www.vknews.in) : ನಿನ್ನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನುಸ್ರತುಲ್ ಇಸ್ಲಾಮಿಕ್ ಯೆಂಗ್ಮೆನ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪ್ರಚೋದನಕಾರಿ ಭಾಷಣ, ಇಸ್ಲಾಂ ಮತ ಪ್ರವಚನ ನಡೆಸಿದ್ದಾರೆ ಎಂದು ಸಂಘಪರಿವಾರ ಸಂಘಟನೆಗಳು ಹೊರಿಸಿದ ಸುಳ್ಳಾರೋಪ ಮತ್ತು ನೀಡಿದ ಪ್ರಕರಣವನ್ನು ಸ್ವೀಕರಿಸಿ FIR ದಾಖಲಿಸಿದ ಪೋಲೀಸರ ನಡೆ ಖಂಡನೀಯ ಎಂದು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ರಫೀಕ್ ಮಾಸ್ಟರ್ ರವರು ಈ ತನಕ ಅನೇಕ ವೇದಿಕೆಗಳಲ್ಲಿ ಯಶಸ್ವಿಯಾಗಿ ಶೈಕ್ಷಣಿಕ ಕಾರ್ಯಗಾರ ನಡೆಸಿದ ಇತಿಹಾಸ ಹೊಂದಿದವರು, ಯಾವುದೇ ಜಾತಿ ಧರ್ಮ ಬೇದವಿಲ್ಲದೆ ಎಲ್ಲರೂ ಶೈಕ್ಷಣಿಕವಾಗಿ ಮೇಲೆ ಬರಬೇಕೆಂಬ ಸದುದ್ದೇಶದಿಂದ ಕಾರ್ಯಗಾರ ನಡೆಸುವವರಲ್ಲಿ ನಿಸ್ಸೀಮರಾಗಿರುವ ಶಿಕ್ಷಕರಾಗಿದ್ದಾರೆ. ಅವರ ಪ್ರೋತ್ಸಾಹದಾಯಕ ಭಾಷಣ ಅಥವಾ ಮಾತಿನಿಂದ ಹಲವಾರು ವಿಧ್ಯಾರ್ಥಿಗಳಿಗೆ ಉತ್ತಮ ಪ್ರಯೋಜನ ಉಂಟಾಗಿದೆ. ಈ ನಿಟ್ಟಿನಲ್ಲಿ ಅಡ್ಯನಡ್ಕದ ಯೆಂಗ್ಮೆನ್ಸ್ ನವರು ಕೂಡ ಅವರನ್ನು ಕರೆಸಿ ಶೈಕ್ಷಣಿಕ ಕಾರ್ಯಗಾರ ನಡೆಸಿದ್ದಾರೆ.
ಆದರೆ ಕೋಮು ವೈಷಮ್ಯವನ್ನು ಮಾತ್ರ ತಲೆಗೆ ಹಚ್ಚಿಕೊಂಡಿರುವ ಸಂಘಪರಿವಾರ ಸಂಘಟನೆಗಳು ಈ ಕಾರ್ಯಕ್ರಮದ ಮೇಲೂ ದಾಳಿ ಮಾಡಿ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಅಲ್ಲಿಂದ ಬಲವಂತವಾಗಿ ಹೊರಗೆ ಕಳುಹಿಸಿ ಕಾರ್ಯಕ್ರಮದ ಆಯೋಜಕರ ಮೇಲೆ ಸುಳ್ಳಾರೋಪ ಹೊರಿಸಿ ಅವರ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ಒತ್ತಡ ಹಾಕಿ ಪ್ರಕರಣ ದಾಖಲಿಸಿರುವುದು ದುರದೃಷ್ಟಕರ ಎಂದು ಇಬ್ರಾಹಿಂ ಸಾಗರ್ ಅವರು ಹೇಳಿದ್ದಾರೆ.
ಅದೇ ರೀತಿ ಸಾರ್ವಜನಿಕ ರಸ್ತೆಯಲ್ಲಿ ಬಹಿರಂಗವಾಗಿ ಮೈಕ್ ಮೂಲಕ ಇಸ್ಲಾಂ ಈ ದೇಶಕ್ಕೆ ಅಪಾಯಕಾರಿ, ಮುಸ್ಲಿಮ್ ರನ್ನು ಕೊಲ್ಲಬೇಕು, ಹೊಡಿಯಬೇಕು ಬಡಿಯಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡುವ ಹಿಂದುತ್ವ ನಾಯಕರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸುವ ನಿಯಮ ಇದ್ದರೂ ಯಾವುದೇ ಕ್ರಮ ಕೈಗೊಳ್ಳದ ಮತ್ತು ಒತ್ತಡಕ್ಕೆ ಮಣಿದು ಸಣ್ಣಪುಟ್ಟ ಸೆಕ್ಷನ್ ಹಾಕಿ ಕೈತೊಳೆದುಕೊಳ್ಳುವ ಪೋಲಿಸ್ ಇಲಾಖೆ ಸಂಘಪರಿವಾರದ ಒತ್ತಡಕ್ಕೆ ಮಣಿದು ಶೈಕ್ಷಣಿಕ ಕಾರ್ಯಗಾರ ನಡೆಸಿದವರ ಮೇಲೆಯೇ ಪ್ರಕರಣ ದಾಖಲಿಸಿರುವುದು ಖಂಡನೀಯ ಹಾಗೂ ಈ ಪ್ರಕರಣವನ್ನು ಕೂಡಲೇ ವಾಪಸ್ ಹಿಂಪಡೆಯಬೇಕು ಹಾಗೂ ಶಾಂತಿಯಲ್ಲಿರುವ ಅಡ್ಯನಡ್ಕದಲ್ಲಿ ಸುಖಾಸುಮ್ಮನೆ ಸುಳ್ಳಾರೋಪಗೈದು ಶಾಂತಿ ಕದಡಲು ಯತ್ನಿಸುತ್ತಿರುವ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಹಾಗೂ ಘಟನೆ ನಡೆದು 24 ಗಂಟೆ ಕಳೆದರು ಜಾತ್ಯಾತೀತ ಪಕ್ಷ ಎಂದು ಬಿಂಬಿಸಿಕೊಂಡು ಮುಸ್ಲಿಮ್ರ ಮತಕ್ಕೆ ನಾವೇ ವಾರಿಸುವುದಾದರು ಎಂದು ಭಾಷಣ ಬಿಗಿಯುವ ಜಾತ್ಯಾತೀತ ಪಕ್ಷಗಳು ಮೌನ ವಹಿಸಿರುವುದು ಕೂಡ ಅಪಾಯಕಾರಿ ನಡೆಯಾಗಿದೆ ಎಂದು ಇಬ್ರಾಹಿಂ ಸಾಗರ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.