ವಿಧ್ಯಾ ಸಂಸ್ಥೆಗಳು ನಾಡಿನ ಭವಿಷ್ಯವನ್ನು ನಿರ್ಣಯಿಸುವ ಕೇಂದ್ರಗಳು – ಏವಿ ಉಸ್ತಾದ್
ಮಾಣಿ (www.vknews.in) ; ನೈತಿಕ ಮತ್ತು ಲೌಕಿಕ ಶಿಕ್ಷಣ ಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಮಾಜವನ್ನು ಬಲಿಷ್ಟವಾಗಿ ಕಟ್ಟಲು ಸಾದ್ಯವಾಗುತ್ತದೆ. ಸಮಾಜದ ಯುವಕರು ಸಾಮಾಜಿಕ ತಾಣಗಳಲ್ಲಿ ಸಮುದಾಯಕ್ಕೆ ಲಾಭಕರವಲ್ಲದ ಯಾವುದೇ ಚರ್ಚೆಗಳಲ್ಲಿ ಭಾಗವಹಿಸುವ ಬದಲು ಶಿಕ್ಷಣ,ದೀನಿ ದಾವತ್,ಸೇವಾ ಕೈಂಕರ್ಯಗಳಿಗೆ ಒತ್ತು ಕೊಟ್ಟು ಕಾರ್ಯ ಪ್ರವೃತರಾಗ ಬೇಕಾಗಿದೆ. ಶಂಸುಲ್ ಉಲಮಾರಂತಹ ಮೇದಾವಿಗಳ ಶ್ರಮ ಫಲವಾಗಿ ಹಲವು ಶಿಕ್ಷಣ ಕೇಂದ್ರಗಳು ನಾಡಿನೆಲ್ಲೆಡೆ ಉದಯ ಗೊಂಡವು.
ದಾರುಸ್ಸಲಾಂ ನಂದಿ ಅರಬಿಕ್ ಕಾಲೇಜ್ ಸಮೇತ ಹಲವಾರು ಸಂಸ್ಥೆಗಳು ನಾಡಿನ ಭವಿಷ್ಯ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ದಾರುಸ್ಸಲಾಂ ಸಂಸ್ಥೆಯ ಕುಲಪತಿ ಏವಿ ಉಸ್ತಾದ್ ಹೇಳಿದ್ದಾರೆ. ಶಂಸುಲ್ ಉಲಮಾರವರ ಜ್ಞಾನ ದಾರೆಯಿಂದ ದನ್ಯಗೊಂಡ ಜಾಮಿಅ ದಾರುಸ್ಸಾಲಾಂ ನಂದಿ ಕಲ್ಲಿಕೋಟೆ ಇದರ ಘಟಿಕೋತ್ಸವ ಇದೆ 26 ಕ್ಕೆ ನಡೆಯಲಿದ್ದು ಇದರ ಪ್ರಚಾರ ಪ್ರಯುಕ್ತ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಮಾಣಿ ಜನಪ್ರಿಯ ಗಾರ್ಡನ್ ನಲ್ಲಿ ಹಮ್ಮಿ ಕೊಂಡಿದ್ದ ಶಬೇ ಮಿಹ್ರಾಜ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಟೀಕೆ ಟಿಪ್ಪಣಿಗಳಿಗೆ ಉಲಮಾಗಳು ಎದೆಗುಂದಬಾರದು; ಕೊಯ್ಯೋಡ್ ಉಸ್ತಾದ್
ಸಮಸ್ತ ಕೇಂದ್ರ ಸಮಿತಿಯ ಕೋಶಧಿಕಾರಿ ಮೂಡಿಗೆರೆ ಖಾಝಿ ಶೈಖುನಾ ಕೊಯ್ಯೋಡ್ ಉಸ್ತಾದ್ ಉದ್ಘಾಟಿಸಿ ಮಾತನಾಡಿ, ಟೀಕೆ ಟಿಪ್ಪಣಿಗಳು ಅದೇನೇ ಬಂದರೂ ಅದನ್ನೆಲ್ಲಾ ಸಹಿಸಿ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಉಲಮಾಗಳಿಂದಾಗಿ ಧರ್ಮ ನಲೆನಿಂತಿದ್ದು ವಿಶ್ವಾಸಿಗಳಾದ ಜನ ಸಾಮಾನ್ಯರು ಉಲಮಾಗಳ ಕೈ ಬಲಪಡಿಸಲು ಕಂಕಣ ಬದ್ದರಾಗಿದ್ದಾರೆ ಎಂದರಲ್ಲದೇ ದಾರಿಮಿಗಳಂತಹ ಪಂಡಿತರು ನಾಡಿನೆಲ್ಲೆಡೆ ಶಾಂತಿ ಮತ್ತು ಸೌಹಾರ್ಧತೆಯ ವಾತಾವರಣ ನಿರ್ಮಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದಾರೆ ಎಂದರು.
ದಾರಿಮಿಗಳು ಪ್ರಶೋಬಿಸುತ್ತಿದ್ದಾರೆ – ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಖಾಝಿ ಶೈಖನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ಶಂಸುಲ್ ಉಲಮಾರ ಅಪಾರ ಬುದ್ದಿ ಶಕ್ತಿಯಿಂದಾಗಿ ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ಕಳೆದ ಶತಮಾನದಲ್ಲಿ ವೇಗ ದೊರಕಿತು. ಇಸ್ಲಾಂ ಧರ್ಮದ ನಂಬಿಕೆಯನ್ನು ಗೇಲಿ ಮಾಡಿದವರಿಗೆ ಸೂಕ್ತ ಉತ್ತರ ನೀಡಲು ಶಂಸುಲ್ ಉಲಮಾರು ನಮಗೆ ಮಾದರಿ ತೋರಿಸಿದ್ದರು. ಈಗ ಶುಹೈಬ್ ಹೈತಮಿಯಂತವರು ಈಕೆ ಉಸ್ತಾದರ ಮಾದರಿ ಸ್ವೀಕರಿಸಿ ನಾಸ್ತಿಕತೆಯೊಂದಿಗೆ ಸಂವಾದದಲ್ಲಿ ಏರ್ಪಟ್ಟಿದ್ದು ಖುಷಿಯ ವಿಚಾರ ಎಂದರು. ಎಲ್ಲಾ ಕ್ಷೇತ್ರದಲ್ಲು ದಾರಿಮಿಗಳು ಪ್ರಶೊಬಿಸುತ್ತಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.
ನಾಸ್ತಿಕ ವಾದದಿಂದ ನೈತಿಕತೆಗೆ ಕೊಡಲಿಯೇಟು – ಶುಹೈಬ್ ಹೈತಮಿ
ಖ್ಯಾತ ಚಿಂತಕ ಶುಹೈಬ್ ಹೈತಮಿ ಮಾತನಾಡಿ, ಧರ್ಮದ ಆಚಾರ ವಿಚಾರಗಳನ್ನು ಅಲ್ಲಗೆಳೆದು ನಾಸ್ತಿಕತೆಗೆ ಜನರನ್ನು ಪ್ರೇರೇಪಿಸುವವರಿಂದಾಗಿ ಜಗತ್ತಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಜಗತ್ತನ್ನು ನಿಯಂತ್ರಿಸುವ ಶಕ್ತಿಯ ಮೂಲದ ಬಗ್ಗೆ ಇನ್ನೂ ವಿಜ್ಞಾನಕ್ಕೆ ಯಾವುದೇ ತೀರ್ಮಾನಕ್ಕೆ ಬರಕು ಸಾಧ್ಯವಾಗಿಲ್ಲ. ಆದ್ರೆ ವಿಜ್ಞಾನದ ಸಂಶೋದನೆಗಳು ಪ್ರವಾದಿಗಳ ಮಿಹ್ರಾಜ್ ನಂತಹ ಅದ್ಬುತ ಘಟನೆಗಳನ್ನು ಸಾಕ್ಷೀಕರಿಸುತ್ತಿದೆ ಎಂದರು.
ಶಂಸುಲ್ ಉಲಮಾ ಒಬ್ಬ ಪವಾಡ ಪುರುಷ – ಹಾಶಿಕ್ ದಾರಿಮಿ
ಖ್ಯಾತ ವಾಗ್ಮಿ ಆಶಿಕ್ ದಾರಿಮಿ ಆಲಪುಲ ಮಾತಾಡಿ, ಈಗ ಇಸ್ಲಾಮಿಕ್ ಧಾರ್ಮಿಕ ಕ್ಷೇತ್ರದಲ್ಲಿರುವ ಎಲ್ಲಾ ಮತ ಪಂಡಿತರ ಗುರುವರ್ಯರಾಗಲು ಭಾಗ್ಯ ಲಭಿಸಿದ ಮಹಾನ್ ಚೇತನ ಶಂಸುಲ್ ಉಲಮಾ ರವರು ತಮ್ಮ ಮರಣದ ತನಕ ಜ್ಞಾನ ಪ್ರಸಾರ ಮಾಡಲು ದಾರುಸ್ಸಲಾಮ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ಅದರ ಕೀರ್ತಿ ಹೆಚ್ಚಲು ಕಾರಣವಾಯಿತು.ಶಂಸುಲ್ ಉಲಮಾ ಅಂತ್ಯವಿಶ್ರಾಂತಿ ಪಡೆಯುತ್ತಿರುವ ವರಕ್ಕಲ್ ಸಮುಚ್ವಯ ಇಂದು ದಾರುಸ್ಸಲಾಮಿನ ಸುಪರ್ದಿಯಲ್ಲಿರುವುದು ಶಂಸುಲ್ ಉಲಮಾರ ಪವಾಡಕ್ಕೆ ಸಾಕ್ಷಿ ಎಂದರು.
ಸಂಜೆ ತ್ವಾಹ ಜಿಪ್ರಿ ತಂಙಲ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಅಜ್ಮೀರ್ ಮತ್ತು ಶಂಸುಲ್ ಉಲಮಾ ಮೌಲದ್ ನಡೆಯಿತು.
ವಕಪ್ ಹಜ್ ಸಮಿತಿಗಳಲ್ಲಿ ಸಮಸ್ತದ ವ್ಯಕ್ತಿಗಳಿಗೆ ಪರಿಗಣನೆ – ಯು ಟಿ ಖಾದರ್
ಸಮಾಜದ ಎಲ್ಲಾ ಸ್ತರಗಳಲ್ಲಿ ಇರುವ ಜನರು ಉಲಮಾ ಪಂಡಿತರ ಮಾರ್ಗ ನಿರ್ಧೆನದಂತೆ ಮುನ್ನಡೆಯ ಬೇಕಿದೆ.ಉದ್ವೇಗ ಪ್ರಚೋದನೆಗೆ ಒಳಗಾಗಿ ಎಲ್ಲವನ್ನು ನಷ್ಟ ಪಡಿಸಿ ಕೊಳ್ಳುವ ಪ್ರವೃತಿಗಳಿಂದ ಯುವ ಪೀಳಿಗೆ ದೂರ ನಿಲ್ಲ ಬೇಕಿದೆ. ಸಮಸ್ತದ ಕಾರ್ಯವೈಖರಿ ಶಾಂತಿ ಮತ್ತು ಪ್ರೀತಿ ಹಂಚುವದ್ದಾಗಿದೆ. ವಕಪ್ ಮತ್ತು ಹಜ್ ಸಮಿತಿಯಲ್ಲಿ ಸಮಸ್ತದ ಜನರಿಗೆ ಪ್ರಾತಿನಿಧ್ಯ ದೊರಕಲು ಪ್ರಯತ್ನ ಪಡಲಾಗುವುವುದು ಎಂದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ ಕೆ ಬಂಬ್ರಾಣ ಉಸ್ತಾದ್ ಮಾತನಾಡಿ ಮಿಹ್ರಾಜ್ ನ ವಿಶೇಷತೆಯ ಬಗೆ ವಿವರಿಸಿದರು.
ವಿಶೇಷ ಮಿಹ್ರಾಜ್ ಮಜ್ಲಿಸ್
ಹಲವಾರು ಸಾದಾತುಗಳ ಆಶಿರ್ವಾದದೊಂದಿಗೆ ನಡೆದ ಮಿಹ್ರಾಜ್ ಮಜ್ಜಿಸ್ ವಿಶ್ಚಾಸಿಗಳ ಮನ ತಣಿಸಿತು.ಧಿಕ್ರ್ ದುಹಾಗಳಿಂದ ದನ್ಯಗೊಂಡ ಮಜ್ಲಸ್ ನ ಪ್ರಯೊಜನವನ್ನು ಹೆಚ್ಚಿನ ಸಂಖ್ಯೆಯ ಜನ ಪಡೆದು ಕೊಂಡರು. ರೋಗ ರುಜಿನಗಳಿಂದ ಮುಕ್ತಿ ಪಡೆಯಲು ,ಸಂಕಷ್ಟದಿಂದ ಪಾರಾಗಲು ಹೀಗೆ ಹಲವಾರು ಉದ್ದೇಶ ಈಡೇರಲು ಪ್ರಾರ್ಥನೆ ನಡೆಸಲಾಯಿತು.
ರಾಜ್ಯ ಉಲಮಾ ಒಕ್ಕುಟದ ಅಧ್ಯಕ್ಷ ಸಭೆಯನ್ನು ಸಭೆಯನ್ನು ಸಮರ್ಪಕವಾಗಿ ನಿಯಂತ್ರಿಸಿದರು. ಮೌಲಾನಾ ಚೊಕ್ಕಬೆಟ್ಟು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಖ್ಯಾತಿ ವಾಗ್ಮಿ ಹನೀಪ್ ನಿಝಾಮಿ,ಉಮರ್ ದಾರಿಮಿ ಸಾಲ್ಮರ,ಹೈದರ್ ದಾರಿಮಿ ಕರಾಯ,ಇಬ್ರಾಹಿಂ ಬಾಖವಿ,ತಬೂಕ್ ದಾರಿಮಿ ಮೊದಲಾದವರು ಮಾತನಾಡಿದರು. ಹಲವಾರು ಉಲಮಾ ಉಮಾರಾ ಗಣ್ಯರು ಬಾಗವಹಿಸಿದ್ದರು. ಮೂಸಲ್ ಪೈಜಿ ಪಾಟ್ರಕೋಡಿ ಯವರ ದುಹಾದೊಂದಿಗೆ ಜನಪ್ರಿಯ ಗಾರ್ಡನ್ ಮ್ಯಾನೇಜರ್ ಇಸ್ಮಾಯಿಲ್ ಹಾಜಿ ದ್ವಜಾರೋಹಣ ಗೈದರು.
(ಇಸ್ಮಾಯಿಲ್ ತಂಙಳ್ ,ಯೂಸುಪ್ ಹಾಜಿ ಪೆದಮಲೆ,ಇಬ್ರಾಹಿಂ ಕಡವ ಇವರ ನೇತೃತ್ವದ ನಿಸ್ವಾರ್ಥ ಸೇವೆಗೆ ಹೆಸರಾದ ಎಸ್ಕೆ ಎಸ್ಸೆಸ್ಸೆಪ್ ವಿಖಾಯ ತಂಡ ಕಾರ್ಯಕ್ರಮದಾದ್ಯಂತ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.)
ಹಬೀಬುರ್ರಹ್ಮಾನ್ ತಂಙಲ್, ಶರಪುದ್ದೀನ್ ತಂಙಳ್, ಅಕ್ರಮ್ ಅಲಿ ತಂಙಳ್, ಅಮೀರ್ ತಂಙಳ್, ಬಾತಿಷಾ ತಂಙಳ್, ಕುಕ್ಕಾಜೆ ಬಾ ಅಲವಿ ತಂಙಳ್, ಕುನ್ನುಂಗೈ ಮಹಮೂದ್ ತಙಳ್, ಹುಸೈನ್ ದಾರಿಮಿ ರೆಂಜಲಾಡಿ, ಎಲ್ ಟಿ ರಝಾಕ್ ಹಾಜಿ, ರಪೀಕ್ ಹಾಜಿ ಸುಲ್ತಾನ್ ಕೊಡಾಜೆ, ರಾಜ್ ಕಮಲ್ ಉಮರ್ ಹಾಜಿ, ಹಸೈನಾರ್ ಹಾಜಿ ಕೊಯಿಲ, ಬಿ ಎಂ ಶೌಕತ್ ಅಲಿ ಕೃಷ್ಣಾಪುರ, ರಶೀದ್ ಹಾಜಿ ಪರ್ಲಡ್ಕ, ರಪೀಕ್ ಹಾಜಿ ಕೊಡಾಜೆ, ಹಕೀಂ ಪರ್ತಿಪಾಡಿ, ಸಲಾಂ ಪೈಝಿ ಉಪ್ಪಿನಂಗಡಿ, ಅಶ್ರಪ್ ಹಾಜಿ ಸಿಟಿ, ಕೆ ಬಿ ಅಬ್ದುಲ್ ಖಾದಿರ್ ದಾರಿಮಿ, ಶರೀಪ್ ಪೈಜಿ ಕಡಬ, ಹಸೈನಾರ್ ಹಾಜಿ ಕೊಯಿಲ, ಖಾದರ್ ಮಾಸ್ಟರ್ ಬಂಟ್ವಾಳ, ಸಿತಾರ್ ಮಜೀದ್ ಹಾಜಿ, ಹಾಜಿ ಅಬ್ದುಲ್ ರಹ್ಮಾನ್ ಆಜಾದ್ ದರ್ಬೆ, ಎಂಎಸ್ ಹಮೀದ್, ಕೆಎಂಎ ಕೊಡುಂಗೈ, ತಾಜ್ ಮುಹಮ್ಮದ್ ಕಲ್ಲಗುಂಡಿ, ಹಮೀದ್ ಕುಕ್ಕರ ಬೆಟ್ಟು, ಝಕರಿಯಾ ಹಾಜಿ ಆತೂರು, ಹಮೀದ್ ದಾರಿಮಿ ಸಂಪ್ಯ, ಕೆ ಎಲ್ ಉಮರ್ ದಾರಿಮಿ ಪಟ್ಟೋರಿ, ಮಜೀದ್ ದಾರಿಮಿ ಮಿತ್ತುರು, ಅಝಿಜ್ ದಾರಿಮಿ ಕೊಡಾಜೆ, ನಝಿರ್ ಅಝ್ಹರಿ ಬೊಲ್ಮಿನಾರ್, ಉಮರ್ ದಾರಿಮಿ ಮುಪತ್ತಿಷ್, ಮೂಸಾ ದಾರಿಮಿ ಕಕ್ಕಿಂಜೆ, ಇಬ್ರಾಹಿಂ ದಾರಿಮಿ ಕಡಬ, ಸಿದ್ದೀಖ್ ದಾರಿಮಿ ಒಮಾನ್, ಕಾಸಿಂ ದಾರಿಮಿ ಕಿನ್ಯ, ಹೈದರ್ ದಾರಿಮಿ ಅಡ್ಯನಡ್ಕ, ಅಹ್ಮದ್ ದಾರಿಮಿ ಕಂಬಲಬೆಟ್ಟು, ಹಮೀದ್ ಕರಾವಳಿ ಅಬೂಬಕರ್ ಮುಲಾರ್, ಆರ್ ಪಿ ರಝಾಕ್ ಪುತ್ತೂರು, ಇಬ್ರಾಹಿಂ ಹಾಜಿ ರಾಜ್ ಕಮಲ್, ಶಕೂರ್ ಹಾಜಿ ರೆಂಜಲಾಡಿ, ಮುಹಮ್ಮದ್ ಚೊಕ್ಕಬೆಟ್ಟು ಮೊದಲಾದ ಅನೇಕ ಗಣ್ಯರು ಉಪಸ್ಥಿತರಿದ್ದರು. ಹನೀಪ್ ದಾರಿಮಿ ಸವಣೂರು ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.