ಮಂಗಳೂರು (www.vknews.in) ; ದರ್ಗಾ ಹರಾಜು ಎಂಬ ವರದಿಯೊಂದು ಇತ್ತೀಚಿನಿಂದ ಹರಿದಾಡುತ್ತಿದ್ದು ಇದರ ಹಿಂದಿರುವ ನಿಜಸಂಗತಿ ಏನೆಂದು ಬಹಿರಂಗ ಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆಗ್ರಹಿಸಿದ್ದಾರೆ.
ದರ್ಗಾ ಎಂಬುದು ಸಂತಪುರುಷರು ಮರಣ ಹೊಂದಿದ ಸ್ಥಳವಾಗಿದ್ದು ಹರಾಜಾಗಬೇಕಾದ ಸ್ಥಳವಲ್ಲ. ಸಂತಪುರುಷರು ಸೃಷ್ಟಿಕರ್ತ ಅಲ್ಲಾಹುವಿನ ಇಷ್ಟದಾಸರಾದ ಕಾರಣ ಮರಣದ ನಂತರ ಕೂಡ ಅವರು ಅಲ್ಲಾಹು ನೀಡುವ ವಿಶೇಷ ಪವಾಡದಿಂದ ಇಷ್ಟಸಿದ್ಧಿ ಪೂರೈಸುತ್ತಾರೆಂದು ಇಸ್ಲಾಂ ಧರ್ಮದ ಪ್ರಮಾಣಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾದಿಗಳ, ಸಂತಪುರುಷರ,ಮುಸ್ಲಿಂ ವಿದ್ವಾಂಸರ ದರ್ಗಾ ಗಳಿದ್ದು ಜಾಗತಿಕ ಮುಸ್ಲಿಮರು ವಾರ್ಷಿಕ ಉರೂಸ್ ಸಂದರ್ಭಗಳಲ್ಲಿ ಮತ್ತು ಇತರ ಸಂದರ್ಭದಲ್ಲಿ ದರ್ಗಾ ಸಂದರ್ಶನ ನಡೆಸುತ್ತಾರೆ.
ಮುಸ್ಲಿಮೇತರರು ಕೂಡ ಉಳ್ಳಾಲ, ಕಾಜೂರು, ಕಾಸರಗೋಡು ಸಹಿತ ದರ್ಗಾ ಗಳಿಗೆ ತೆರಳಿ ಹರಕೆ ಸಲ್ಲಿಸುತ್ತಿದ್ದಾರೆ.ಮಂಗಳೂರಿನಿಂದ ಪ್ರಕಟವಾಗುವ ಪತ್ರಿಕೆಯೊಂದರಲ್ಲಿ ಈ ಕುರಿತ ವರದಿ ಪ್ರಕಟವಾಗಿದ್ದು ಇದು ಮುಸ್ಲಿಂ ಸಮುದಾಯದೊಳಗೆ ಗೊಂದಲಗಳಿಗೆ ಕಾರಣವಾಗಿದೆ. ಈ ಘಟನೆ ಖಂಡನೀಯವಾಗಿದ್ದು ಇದರ ಹಿಂದಿರುವವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಕೇರಳದ ಒಂದು ಕಡೆ ನಡೆದಿದೆ ಎನ್ನಲಾದ ದರ್ಗಾ ಹರಾಜು ಎಂಬ ಸುದ್ದಿ ಊಹಾಪೋಹಗಳಿಂದ ಕೂಡಿದ್ದು ಇದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಗೊಂದಲ ವನ್ನು ಬಗೆಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.