(www.vknews.in) ; ಕೊಳ್ನಾಡು ಗ್ರಾಮದ ಅಗರಿ ರಸ್ತೆಗೆ ಸರಿಸುಮಾರು 30 ವರ್ಷಗಳಿಂದ ಡಾಮರೀಕರಣಕ್ಕಾಗಿ ಸಾರ್ವಜನಿಕರು ಕಾಂಗ್ರೆಸ್ ಆಡಳಿತದಲ್ಲಿರುವ ಪಂಚಾಯತ್ ಸದಸ್ಯರಿಂದ ಹಿಡಿದು ಸಚಿವರಲ್ಲೂ ಬೇಡಿಕೆಯನ್ನು ಇಟ್ಟರೂ ಒಂದಿಂಚು ಕದಲದೆ ಚುನಾವಣೆ ಬಂದಾಗ ಜನರ ಕಣ್ಣಿಗೆ ಮಣ್ಣೆರಚಿ ಈಗ ನೀತಿ ಸಂಹಿತೆ ಜಾರಿಯಲ್ಲಿದೆ, ಚುನಾವಣೆ ಮುಗಿದ ತಕ್ಷಣ ಬಂಟ್ವಾಳ ತಾಲೂಕಿನಲ್ಲಿ ಮೊದಲ ಕೆಲಸವೆಂದರೆ ಅಗರಿ ರಸ್ತೆಗೆ ಡಾಮರೀಕರಣ ಎಂದು ಹೇಳಿ ಮೋಸ ಮಾಡುವುದನ್ನು ಅರಿತ ಅಗರಿ ಭಾಗದ ಸಾರ್ವಜನಿಕರು ಪಂಚಾಯತ್ ಚುನಾವಣೆಯಲ್ಲಿ 4 ಸದಸ್ಯರನ್ನು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಾರ್ವಜನಿಕ ಸೇವೆಗೆ ಅವಕಾಶ ಮಾಡಿಕೊಡಲಾಯಿತು.
ಕೇವಲ 2 ವರ್ಷ ಪೂರೈಸುವ ಮೊದಲೇ ಸದಸ್ಯರಾದ ಲೋಹಿತ್ ಕೆಳಗಿನ ಅಗರಿ ಹಾಗು ಪ್ರಶಾಂತ್ ಕುಮಾರ್ ಶೆಟ್ಟಿ ಅಗರಿಯವರ ಸತತ ಪ್ರಯತ್ನದಿಂದ ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಅವರ ಗಮನಕ್ಕೆ ತಂದು ಅಗರಿ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ರಸ್ತೆ ಕಾಂಕ್ರಿಟ್ ಮಾಡುವ ಮೂಲಕ ಈಡೇರಿಸಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಎಂಬ ಗಾದೆ ಮಾತು ಸರಿಯಾಗಿಯೇ ಇದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದಾಗ ಬಂಟ್ವಾಳ ಮಾಜಿ ಶಾಸಕರು ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾದ ಸಮಯದಲ್ಲಿ ತೋಡಾರು ಆನಂದ ಶೆಟ್ಟಿಯವರ ಖಾಸಗಿ ರಸ್ತೆಯನ್ನು ಪಂಚಾಯತ್ತಿಗೆ ಹಸ್ತಾಂತರಿಸಿ ಸ್ವಾತಂತ್ರ್ಯ ಹೊರಗಾಟಗಾರ ಅಣ್ಣಪ್ಪ ಬಂಗೇರ ಕುಳಾಲು ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಬೇಕು ಎಂದಾಗಿತ್ತು ಅವರ ಬೇಡಿಕೆ. ಅವರ ಬೇಡಿಕೆಯಂತೆ ಡಾಮರೀಕರಣಕ್ಕಾಗಿ ಎರಡೆರಡು ಬಾರಿ ಜಲ್ಲಿ ಕಲ್ಲುಗಳನ್ನು ತಂದು ಹಾಕಲಾಯಿತು ಆದರೂ ಕಾಂಗ್ರೆಸ್ ಪಕ್ಷದಲ್ಲೇ ಇರುವ ಕೆಲವೊಂದು ವಿಘ್ನ ಸಂತೋಷಿಗಳು ಅಧಿಕಾರ ದಾಹಿಗಳು ಆ ಜಲ್ಲಿ ಕಲ್ಲುಗಳನ್ನು ಬೇರೆ ಕಡೆಗೆ ಹಸ್ತಾಂತರಿಸಿ ಅಗರಿ ಭಾಗದ ಜನರಿಗೆ ಕಾಂಗ್ರೆಸ್ ಅನ್ಯಾಯವನ್ನು ಮಾಡಿತ್ತು.
ಇದೆಲ್ಲವನ್ನು ಸಹಿಸಿದ ಅಗರಿ ಭಾಗದ ಜನರು ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಳಿಸಿ, ಅಭಿವೃದ್ಧಿ ಮಾಡುವಂತಹ ಹೊಸ ಅಭ್ಯಥಿಗಳನ್ನು ಆಯ್ಕೆ ಮಾಡಿ ಕೊಳ್ನಾಡು ಗ್ರಾಮಕ್ಕೆ ಮಾದರಿಯಾಯಿತು. ಅಗರಿ ಭಾಗದಲ್ಲಿ 90% ಮತದಾರರು ಕಾಂಗ್ರೆಸಿಗರಾಗಿದ್ದು 70 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಸಾಧಿಸಲು ಅಸಾಧ್ಯವಾದದನ್ನು ಕೇವಲ 4 ಪಂಚಾಯತ್ ಸದಸ್ಯರು ಮಾಡಿ ತೋರಿಸಿಕೊಟ್ಟಿದ್ದಾರೆ. ಜನರ ಬೇಡಿಕೆಗಳಿಗೆ ಸ್ಪಂದಿಸಿದ ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಪಂಚಾಯತ್ತ್ ಸದಸ್ಯರಾದ ಲೋಹಿತ್ ಕೆಳಗಿನ ಅಗರಿ , ಪ್ರಶಾಂತ್ ಶೆಟ್ಟಿ ಮತ್ತು ಅನಿತಾ ಶೆಟ್ಟಿಗಾರ್ ಹಾಗು ಸೌಮ್ಯಲತಾ ಕಾಡುಮಠ ಅವರಿಗೆ ಅಗರಿ ಸಾರ್ವಜನಿಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
✍🏻 ಬಶೀರ್ ಅಗರಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.