(www.vknews.in) ; ಅನುಷ್ಠಾನ ಯೋಗ್ಯವಲ್ಲದ, ಕಣ್ಕಟ್ಟಿನ ಘೋಷಣೆಗಳ ಪಟ್ಟಿಯ ಬಜೆಟ್ ಇದಾಗಿದ್ದು, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬೊಮ್ಮಾಯಿಯವರಿಗೆ ಗೊತ್ತಿದೆ. ಹೀಗಾಗಿ ಕಾಟಾಚಾರದ ಘೋಷಣೆಗಳೊಂದಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ನಲ್ಲಿ ಎಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕ ದೂರದೃಷ್ಟಿಯ ಯೋಜನೆಗಳು ಕಾಣಿಸುವುದಿಲ್ಲ. 4ವರ್ಷ ಅವಧಿಯಲ್ಲಿ ಆಪರೇಷನ್ ಕಮಲ, ಶೇ.40 ಕಮಿಷನ್, ನೇಮಕಾತಿ ಹಗರಣ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡದೆ ವಂಚಿಸಿದ್ದರ ಜೊತೆಗೆ ರಸಗೊಬ್ಬರದ ಬೆಲೆ ಏರಿಕೆ ಮಾಡಿ ರೈತರ ಬದುಕಿನಲ್ಲಿ ಚೆಲ್ಲಾಟವಾಡಿದ್ದಾರೆ. ಸಾಲದು ಎಂಬಂತೆ ಅಡುಗೆ ಸಿಲಿಂಡರ್ ಬೆಲೆ 1,150 ರೂ.ಗೆ ಏರಿಸಿರುವ ಇವರು ಸಾಮಾನ್ಯ ಜನ ಬದುಕಲೇ ಬಾರದು ಎಂಬಂತಹ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ.
ಇನ್ನು ಹಿಂದಿನ 3 ಬಜೆಟ್ನಲ್ಲಿ ಮಂಡಿಸಿದ ಹಲವು ಭರವಸೆಗಳ ಪೈಕಿ ಶೇ.30ರಷ್ಟು ಭರವಸೆಗಳನ್ನೂ ಈಡೇರಿಸದ ಇವರು ಚುನಾವಣೆ ಇದೆ ಎಂಬ ಕಾರಣ ಪ್ರಚಾರ ಪಡೆಯಲು ಹುರುಳಿಲ್ಲದೆ ಘೋಷಣೆಗಳನ್ನು ಮಂಡಿಸಿದ್ದಾರೆ .ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವೂ ಬಜೆಟ್ನಲ್ಲಿ ಇಲ್ಲ. ಸಂಪ್ರದಾಯದಂತೆ ಬಸವರಾಜ ಬೊಮ್ಮಾಯಿ ವಿದಾಯ ಭಾಷಣ ಬಜೆಟ್ ರೂಪದಲ್ಲಿ ಮಂಡಿಸಿದ್ದಾರೆ .
– – ಜೀಷಾನ್, ಯುವ ಕಾಂಗ್ರೆಸ್ ಮುಖಂಡರು ಅರಕಲಗೂಡು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.