ಗುರುಗ್ರಾಮ (ವಿಶ್ವ ಕನ್ನಡಿಗ ನ್ಯೂಸ್) : ಹರ್ಯಾಣದ ಭಿವಾನಿಯಲ್ಲಿ ಗೋವು ಕಳ್ಳಸಾಗಣೆ ಆರೋಪದ ಮೇಲೆ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಹರಿಯಾಣ ಜಿರ್ಕಾ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಜುನೈದ್ ಮತ್ತು ನಾಸೀರ್ ಹತ್ಯೆಗೂ ಮುನ್ನ ಠಾಣೆಗೆ ಕರೆತಂದಿದ್ದಾಗಿ ಆರೋಪಿಗಳ ಹೇಳಿಕೆ ಹಾಗೂ ಯುವಕರಿಗೆ ಪೊಲೀಸರು ಥಳಿಸಿದ್ದಾರೆ ಎಂಬ ಕುಟುಂಬದವರ ಆರೋಪದ ಕುರಿತು ತನಿಖೆ ನಡೆಸಲಾಗುವುದು. ಎಎಸ್ಪಿ ಉಷಾ ಕುಂದು ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಆರೋಪಿಗಳನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಐವರ ತಂಡ ಯುವಕನನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಒಬ್ಬರನ್ನು ಮಾತ್ರ ಬಂಧಿಸಿದ್ದಾರೆ. ರಾಜಸ್ಥಾನದ ಭರತ್ಪುರದಿಂದ ಅಪಹರಣಕ್ಕೊಳಗಾದ ನಾಸಿರ್ (27) ಮತ್ತು ಜುನೈದ್ (35) ಹರಿಯಾಣದ ಭಿವಾನಿಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಜರಂಗದಳದ ಕಾರ್ಯಕರ್ತರಾದ ಗೋಸಂರಕ್ಷಣಾ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಥಳಿತಕ್ಕೆ ಒಳಗಾಗಿ ಬಳಲಿದ್ದ ಯುವಕರನ್ನು ಠಾಣೆಗೆ ಕರೆತಂದಿದ್ದೆವು ಎಂದು ಬಂಧಿತ ರಿಂಕು ಪೊಲೀಸರಿಗೆ ಹೇಳಿಕೆ ನೀಡಿದ್ದು, ಪೊಲೀಸರು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ. ನಂತರ ಅವರು ಸಾವನ್ನಪ್ಪಿದ್ದಾರೆ. ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಲಾಗಿದೆ ಎಂದು ಬಂಧಿತ ಸಾಕ್ಷ್ಯ ನುಡಿದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.