(www.vknews.in) ; ದೇಶದ ತನಿಖಾ ಸಂಸ್ಥೆಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರ ಮನೆಗಳಿಗೆ, ಸಂಸ್ಥೆಗಳಿಗೆ ದಾಳಿ ಮಾಡುತ್ತಿರುವುದು ದೇಶಕ್ಕೆ ತಿಳಿದಿರುವ ವಿಚಾರ. ದೇಶಾದ್ಯಂತ ಯಾವ ರಾಜ್ಯದಲ್ಲಿ ಚುನಾವಣೆಗೆ ತಯಾರಿ ಆರಂಭವಾಗುತ್ತದೋ ಅದಕ್ಕಿಂತ ಮೊದಲು ರಾಜಕೀಯ ಎದುರಾಳಿಗಳ ನಾಯಕರ ಮನೆಗಳಿಗೆ- ಸಂಸ್ಥೆಗಳಿಗೆ ದಾಳಿ ಆರಂಭವಾಗುತ್ತದೆ. ಇದು ನಾವು ಪ್ರತೀ ರಾಜ್ಯದ ಚುಣಾವಣೆ ಸಮಯದಲ್ಲಿ ನೋಡುತ್ತಿದ್ದೇವೆ. ಈಗ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಕಾವು ಆರಂಭವಾಗಿದೆ. ಸದ್ಯಕ್ಕೆ ಈ ವರ್ಷ ನಡೆಯುವ ಚುನಾವಣೆಯಲ್ಲಿ ಪ್ರಮುಖವಾಗಿ ಚುನಾವಣೆ ನಡೆಯುವ ರಾಜ್ಯಗಳೆಂದರೆ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಎಲ್ಲಾ ರಾಷ್ಟೀಯ ಪಕ್ಷಗಳಿಗೆ ಅನಿವಾರ್ಯ ಆಗಿದೆ.
ಅದರಲ್ಲೂ ವಿಶೇಷವಾಗಿ ಬಿಜೆಪಿಗೆ ಬಹಳ ಅನಿವಾರ್ಯ ಆಗಿದೆ. ಕಾರಣ ಪ್ರಬಲ ರಾಜ್ಯಗಳಾಗಿದೆ ಈ ರಾಜ್ಯಗಳು. ಇಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ 2024 ರ ಮಹಾಚುನಾವಣೆಯಲ್ಲಿ ಅಧಿಕಾರ ಮುಂದುವರೆಸಲು ಸಾದ್ಯ. ಆಗೆಯೇ ವಿರೋಧ ಪಕ್ಷಗಳಿಗೂ. ಬಿಜೆಪಿಗೆ ಈ ಮೂರು ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಸಾಧ್ಯವಿಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಹಳ ಸವಾಲುಗಳನ್ನು ಎದುರಿಸುವ ಆತಂಕವಿದೆ. ವಿರೋದಿಗಳಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ಅಧಿಕವಾಗಿದೆ. ಹಾಗೆಯೇ ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ವಿರೋಧ ಪಕ್ಷಗಳನ್ನು ಒಂದುಗೂಡಿಸಿಲು ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಆಗೆಯೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರ್ಕಾರದ ವಿರುದ್ಧ ಪ್ರಬಲ ಪೈಪೋಟಿ ನೀಡಲು ಸುಗಮವಾಗುತ್ತದೆ.ಈ ಎಲ್ಲಾ ಕಾರಣಗಳಿಂದ ಈ ವರ್ಷದ ಚುನಾವಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಈಗಿರುವಾಗ ಮೊದಲು ಚುಣಾವಣೆ ಎದುರಿಸುವ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಪ್ರಭಲ ಪೈಪೋಟಿಯನ್ನು ತಡೆಯಲು ಹಾಗೂ ತನ್ನ ಸರ್ಕಾರದ ವಿರುದ್ಧ ರೂಪುಗೊಂಡ ಜನಾಭಿಪ್ರಾಯದಲ್ಲಿ ವಿರೋಧ ಪಕ್ಷಗಳಿಗೆ ಅನುಕೂಲವಾದ ವಾತಾವರಣ ನಿರ್ಮಾಣವಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಇರುವ ಏಕೈಕ ಮಾರ್ಗವೆಂದರೆ ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ರಾಜಕೀಯ ವಿರೋಧಿಗಳನ್ನು ಕಟ್ಟಿಹಾಕುವುದು. ಈ ಮೂಲಕ ಯಶಸ್ವಿಯಾಗಿ ಎಲ್ಲಾ ಕೋನಗಳಿಂದ ಚುನಾವಣೆಯನ್ನು ಎದುರಿಸುವುದು. ಕೇಂದ್ರ ಈ ಮೂಲಕವೇ ಅನೇಕ ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಸಾದ್ಯವಾದದ್ದು.
ಆ ಸಮಯ ಯಾವಾಗ ಕರ್ನಾಟಕ ರಾಜ್ಯದಲ್ಲಿ ಆರಂಭವಾಗುವುದು. ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳುತ್ತದೆ ಎಂಬುದು ನನ್ನ ಅಭಿಪ್ರಾಯ. ಈಡಿ -ಐಟಿ ದಾಳಿ ಮಾಡುವುದಾದರೆ ಎಲ್ಲಾ ಪಕ್ಷಗಳ ನಾಯಕರ ಮನೆಗಳಿಗೆ, ಸಂಸ್ಥೆಗಳಿಗೆ, ವ್ಯಾಪಾರ ಸಂಸ್ಥೆಗಳಿಗೆ ದಾಳಿ ಮಾಡಬೇಕು.ಏನೆಂದರೆ ಆಡಳಿತ ಪಕ್ಷದಲ್ಲಿ ಯಾರು ಅಕ್ರಮವಾಗಿ ಹಣ ಮಾಡಿದವರು ಇಲ್ವೇ. ಎಲ್ರೂ ಸರಿಯಾದ ರೀತಿಯಲ್ಲಿ ವ್ಯಾಪಾರ ನಡೆಸುವವರಾ ಈ ಪಕ್ಷದಲ್ಲಿ ಯಾರು ಕೋಟ್ಯಾಧಿಪತಿಗಳು, ಉದ್ಯಮದಲ್ಲಿ ತೊಡಗಿಸಿಕೊಂಡವರು ಇಲ್ವೇ ಎಲ್ರೂ ಶುದ್ಧಹಸ್ತರೇ ಈ ಎಲ್ಲಾ ಕಾರಣದಿಂದ ದಾಳಿಯಲ್ಲಿ ಸಂಶಯಗಳು ವ್ಯಕ್ತವಾಗುತ್ತಿದೆ. ಆದ ಕಾರಣ ಕರ್ನಾಟಕದಲ್ಲಿ ಯಾವಾಗ ಸಾಮೂಹಿಕ ದಾಳಿಗಳು ಆರಂಭಗೊಳ್ಳಲಿದೆ ಎಂಬುದನ್ನು ನಾನು ಮತ್ತು ಜನಸಾಮಾನ್ಯರು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲಾ ಪಕ್ಷಗಳ ನಾಯಕರ ಮತ್ತು ಬೆಂಬಲಿಗರ ಅಕ್ರಮದ ವಿರುದ್ಧ ತನಿಖೆ ನಡೆಯಲಿ ಎಂಬುದೇ ನನ್ನ ಕಳಕಳಿ.
— ಉಬೈದ್. ಕೆ.ವಿಟ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.