(www.vknews.in) ; ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸಾಮಾನ್ಯ ವರ್ಗದ ಬ್ರಾಹ್ಮಣ ಮತ್ತು ಆರ್ಯವೈಶ್ಯ ಸಮುದಾಯಗಳಿಗೆ ಅನ್ಯಾಯವಾಗಿರುವ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಚರ್ಚೆ ಮೇಲೆ ಉತ್ತರಿಸುತ್ತಾ ಆರ್ಯವೈಶ್ಯ ಸಮುದಾಯಕ್ಕೆ ಹಿಂದಿನ ಆಯವ್ಯಯದಲ್ಲಿ ರೂ 10 ಕೋಟಿ ನಿಗದಿಪಡಿಸಲಾಗಿತ್ತು. ಇಲ್ಲಿಂದಲೂ ಸಹ ಹೆಚ್ಚುವರಿ ಪ್ರಸ್ತಾವನೆ ನಮ್ಮ ಮುಂದೆ ಇದೆ, ನಾನು ಒಂದು ಮಾತನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಇಚ್ಛೆ ಪಡುತ್ತೇನೆ , ಆರ್ಯವೈಶ್ಯ ಅಭಿವೃದ್ಧಿ ನಿಗಮ ಬಹಳ efficient ಆಗಿ ಕೆಲಸ ಮಾಡುತ್ತಿದೆ, ಅಲ್ಲಿ ಎಲ್ಲವನ್ನೂ ಆನ್ಲೈನ್ ಮಾಡಿದ್ದಾರೆ ಸಾಲ ಕೊಡುವುದನ್ನು ಸಹ ಆನ್ಲೈನ್ ಮಾಡಿದ್ದಾರೆ,ರಿಕವರಿ ಶೇಕಡ 100 ರಷ್ಟು ಇದೆ infact, ನಾನು ಕೂಡ ಬೇರೆ ಎಲ್ಲ ನಿಗಮಗಳಿಗೂ ಅವರನ್ನು ನೋಡಿ ಮಾಡಿ ಎಂದು ಹೇಳಿದ್ದೇನೆ, ಆದಕಾರಣ ಈ ಸಾಲಿನಲ್ಲಿ 10 ಕೋಟಿಗಳನ್ನು ಕೊಡುತ್ತೇನೆ ಅವರ ಎಲ್ಲಾ ಕಾರ್ಯಕ್ರಮಗಳಿಗೂ ಬೆಂಬಲವನ್ನು ಕೊಡುತ್ತೇನೆ ಎಂಬುದಾಗಿ ತಿಳಿಸಿರುತ್ತಾರೆ.
ಶ್ರೀ ಡಿ.ಎಸ್.ಅರುಣ್ ರವರು ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ( ಅಕ್ಟೋಬರ್ 2019 ರಿಂದ ನವಂಬರ್ 201) ಇವರ ಅವಧಿಯಲ್ಲಿ ನಿಗಮಕ್ಕೆ ಸರ್ಕಾರದಿಂದ ರೂಪಾಯಿ 21 ಕೋಟಿ ರೂಪಾಯಿಗಳ ಆರ್ಥಿಕ ಅನುದಾನ ಹರಿದುಬರಲು ಶ್ರೀಯುತರ ಶ್ರಮವೇ ಮುಖ್ಯ ಕಾರಣವಾಗಿರುತ್ತದೆ. ಶ್ರೀಯುತರು ತಮ್ಮ ಶ್ರಮದ ಮೂಲಕ ಈ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುತ್ತಾರೆ. ಮುಖ್ಯವಾಗಿ ನಿಗಮದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪೂರ್ಣವಾಗಿ ಡಿಜಿಟಲೀಕರಣ ಗೊಳಿಸುವುದು ಹಾಗೂ ರಿಪೇಮೆಂಟ್ ಅಪ್ಲಿಕೇಶನ್ ಕುರಿತು ಅಧಿಕಾರಿಗಳ ಮನವೊಲಿಸುವುದು,ಸೇರಿದಂತೆ, ನಿಗಮವು ಶೇಕಡ 100 ಕ್ಕೆ 100 ರಷ್ಟು ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಭದ್ರಬುನಾದಿಯನ್ನು ಹಾಕಿರುತ್ತಾರೆ. ಈ ಹಿರಿಮೆ ಶ್ರೀ ಡಿ.ಎಸ್.ಅರುಣ್ ರವರಿಗೆ ಸಲ್ಲಬೇಕಾಗಿರುತ್ತದೆ.
ಮುಂದುವರೆದು ಶ್ರೀಯುತರು ತಮ್ಮ ಅಧ್ಯಕ್ಷ ಸ್ಥಾನದ ಅಧಿಕಾರಾವಧಿಯ ನಂತರವೂ ಸಮಾಜ ಬಂಧುಗಳ ಅಭಿವೃದ್ಧಿಗಾಗಿ ಕಳೆದ ಮೂರು ತಿಂಗಳಿನಿಂದ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಮತ್ತಷ್ಟು ಅನುದಾನವನ್ನು ತರಲು ಸರ್ಕಾರಕ್ಕೆ ಅನೇಕ ಪತ್ರಗಳನ್ನು ಬರೆಯುವುದು, ಮುಖ್ಯಮಂತ್ರಿಗಳನ್ನು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳನ್ನು ಸತತವಾಗಿ ಭೇಟಿಯಾಗುವುದು, ನಿಗಮದ ಸಾಧನೆ ಹಾಗೂ ಸಕಾರಾತ್ಮಕವಾದ ಬೆಳವಣಿಗೆ ಕುರಿತು ಚರ್ಚೆ ನಡೆಸುತ್ತಲೇ ಬಂದಿರುತ್ತಾರೆ. ಆ ಫಲಿತಾಂಶವೇ(16/02/2023) ರಂದು ಮುಖ್ಯಮಂತ್ರಿಗಳು ನಿಗಮದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಹೆಚ್ಚುವರಿ ಆಗಿ ರೂಪಾಯಿ 10 ಕೋಟಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಅವರ ನಿಸ್ವರ್ತ ಸೇವೆ ಆಗಿರುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.