(www.vknews.in) ಪುತ್ತೂರು: ಎಸ್ಸೆಸ್ಸೆಫ್ ಅಮ್ಚಿನಡ್ಕ ಯುನಿಟ್ ವಾರ್ಷಿಕ ಸಭೆಯು 2023 ಫೆಬ್ರವರಿ 2 ರಂದು ಯುನಿಟ್ ಅಧ್ಯಕ್ಷ ಹನೀಫ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ಸಿರಾಜುಲ್ ಹುದಾ ಮದರಸ ಬದಿಯಡ್ಕ ದಲ್ಲಿ ಜರುಗಿತು. SYS ನಾಯಕರಾದ ಬಶೀರ್ ಮುಸ್ಲಿಯಾರ್ ಅವರ ದುಆದೊಂದಿಗೆ ಪ್ರಾರಂಭ, ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿದರು.
ಸಿದ್ದೀಕ್ M K ವರದಿ ಮತ್ತು ಇಸ್ಮಾಯಿಲ್ ಲೆಕ್ಕಪತ್ರ ಮಂಡಿಸಿದರು. ನಂತರ 2023-24 ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ M K ಅಬೂಬಕ್ಕರ್ ಸಿದ್ದೀಕ್ ಮುಖಾರಿಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ B M ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಇಸ್ಮಾಯಿಲ್ ಅವರನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಮಶೂದ್ ಅವರನ್ನು ಕ್ಯಾಂಪಸ್ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಹನೀಫ್ ಮಿಸ್ಬಾಹಿ, ಶಾಫ಼ಿ, ಬಾತಿಶ, ಅಲಿ ಅಸ್ಕರ್, ಮುಹಮ್ಮದ್ ಹಿಶಾಮ್, ಮುಹಮ್ಮದ್ ಝುಬೈರ್, ಮುಹಮ್ಮದ್ ಅಲ್ಪಾಝ್, ಅಬೂಬಕರ್ ಆಮಿಶ್, ಅಬ್ದುರ್ರಹ್ಮಾನ್ ರವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸೆಕ್ಟರ್ ವೀಕ್ಷಕರಾಗಿ ಇರ್ಷಾದ್ ಗಟ್ಟಮನೆ ಕಾರ್ಯ ನಿರ್ವಹಿಸಿದರು. SYS ನಾಯಕರಾದ ಮೂಸಾ ಬದಿಯಡ್ಕ, ಅಶ್ರಫ್ ಹಾಗೂ ಯುನಿಟ್ ಪದಾಧಿಕಾರಿಗಳು ಹಾಜರಿದ್ದರು. ಇಸ್ಮಾಯಿಲ್ ಸ್ವಾಗತಿಸಿ, ಅಬ್ದುಲ್ ಕಾದರ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.