(www.vknews.in) ; ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆ ಇದರ ವತಿಯಿಂದ ಎಸ್.ಕೆ.ಎಸ್.ಎಸ್.ಎಫ್ 35 ನೇ ಸ್ಥಾಪಕ ದಿನಾಚರಣೆಯು ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಮುಂಬಾಗದಲ್ಲಿ ಶಾಖಾಧ್ಯಕ್ಷರಾದ ಫೈಝಲ್ ಡಿಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಆರ್ ಅಹ್ಮದ್ ಶೇಟ್ ರವರು ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ, ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಕೆ ಅಬೂಬಕ್ಕರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಹನೀಫ್ ಜೆ, ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆಯ ನಿರ್ದೇಶಕರಾದ ಹಾಜಿ ಅಬ್ದುರ್ರಹ್ಮಾನ್ ಪನೀರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಹಾಜಿ ಇಲ್ಯಾಸ್ ಡಿ, ಕೋಟೆಕ್ಕಾರ್ ಪಟ್ಟಣ ಪಂಚಾಯತ್ ಮಾಜಿ ಕೌನ್ಸಿಲರ್ ಮೊಹಮ್ಮದ್ ಡಿ.ಎಂ, ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಲೆಕ್ಕ ಪರಿಶೋಧಕರಾದ ಹಾಜಿ ಅಬ್ದುಲ್ ಅಝೀಝ್, ಶಂಸುಲ್ ಉಲಮಾ ಎಜುಕೇಶನಲ್ &ಚಾರಿಟೇಬಲ್ ಟ್ರಸ್ಟ್ ಚೆಯರ್ಮ್ಯಾನ್ ಹಾಜಿ ಇಸ್ಹಾಖ್ ನಾಟೆಕ್ಕಲ್, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಬದ್ಯಾರ್, ಎಸ್.ವೈ.ಎಸ್ ನೇತಾರರಾದ ಸಾಹುಲ್ ಹಮೀದ್ ಹೆಚ್.ಆರ್ ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ, ಶಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುನ್ಸೀದ್, ಕೋಶಾಧಿಕಾರಿ ಮೊಹಮ್ಮದ್ ಇರ್ಫಾನ್ ಡಿ, ಉಪಾಧ್ಯಕ್ಷರಾದ ಮೊಹಮ್ಮದ್ ಯಾಕೂಬ್, ವಿಖಾಯ ಕಾರ್ಯದರ್ಶಿ ತಮೀಮ್ ಅಹ್ಮದ್, ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್ ಅಧ್ಯಕ್ಷರಾದ ಮೊಹಮ್ಮದ್ ಆಶಿಕ್, ಪ್ರಧಾನ ಕಾರ್ಯದರ್ಶಿ ಅಹ್ಮದ್ ಶಮೀಮ್, ಮೊದಲಾದವರು ಉಪಸ್ಥಿತರಿದ್ದರು, ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.