(www.vknews.in) ; ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ವಾರ್ಡ್ ಪಾಂಡೇಶ್ವರ ಓಲ್ಡ್ ಕೆಂಟ್ ರೋಡ್ ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು. ಪಕ್ಷದ ಅಭ್ಯರ್ಥಿಯಾದ ಡಾ. ಸುಮತಿ ಎಸ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಡ್ ಅಧ್ಯಕ್ಷರಾಗಿ ಚಂದ್ರಾವತಿ ಪಾಂಡೇಶ್ವರ , ಶ್ವೇತಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ರತ್ನಾಕರ ಸುವರ್ಣ ಈ ಬಾರಿ ಜನತಾದಳ ದ ಜನಪರ ಕಾರ್ಯಕ್ರಮ ವಾದ ಪಂಚರತ್ನ ದಿಂದ ಜನತೆ ಜೆಡಿಎಸ್ ಗೆ ಮತ ನೀಡಲಿದ್ದಾರೆ ಎಂದರು. ಪಕ್ಷದ ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ ತನ್ನನ್ನು ನೀವು ಆಯ್ಕೆ ಮಾಡಿದಲ್ಲಿ ನುಡಿದಂತೆ ಕ್ಷೇತ್ರದ ಸರ್ವಾಂಗೀನ ಅಭಿವ್ರಧ್ಧಿ ಮಾಡಲು ಗರಿಷ್ಠ ರೀತಿಯಲ್ಲಿ ಶ್ರಮವಹಿಸುತ್ತೇನೆ ಎಂದರು.
ಈ ಸಂಧರ್ಭ ರಾಜ್ಯ ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ, ಮಂಗಳೂರು ದಕ್ಷಿಣ ಕ್ಷೇತ್ರದ ಪ್ರ.ಕಾರ್ಯದರ್ಶಿ ಪ್ಯಾಟ್ರಿಕ್ ಮಿಲ್ಟೊನ್, ಶಾರದಾ ಶೆಟ್ಟಿ, ಕವಿತಾ, ಚೂಡಾಮಣಿ, ದಿನೇಶ್ ಪಯಿಸ್ , ಜಾವೇದ್ ಪಾಂಡೇಶ್ವರ , ಮನೋಜ್ ಕುಮಾರ್ , ಲತೀಫ್ ಶಿವಭಾಗ್ , ಪ್ರವೀಣ್ , ಪ್ರಿಯಾ ಸಾಲಿಯಾನ್, ನಂತೂರು ವಲಯಾಧ್ಯಕ್ಷ ಜಯರಾಂ, ಬಸವರಾಜ್ , ನೀಲಾ ,ಗಿರಿಜಾ ಹಾಗೂ ಹಲವು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು . ವಿನ್ಸೆಂಟ್ ಪೆರೇರಾ ವಂದಿಸಿದರು . ಮಂಗಳೂರು ದಕ್ಷಿಣ ಕ್ಷೇತ್ರ ಪ್ರ. ಕಾರ್ಯದರ್ಶಿ ಅಲ್ತಾಫ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.