(www.vknews.in) ದಕ್ಷಿಣ ಕನ್ನಡ ಜಿಲ್ಲಾ ಎಸ್ಡಿಎಂಸಿ ಸಮನ್ವಯ ವೇದಿಕೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ವತಿಯಿಂದ ಪೆಬ್ರವರಿ 28 ತಾರೀಕು ನಂದು ನೇರಳಕಟ್ಟೆ ಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಲಿರುವ ದ ಕ.ಜಿಲ್ಲಾ ಎಸ್ಡಿಎಂಸಿ ಸಮಾವೇಶ ಮತ್ತು ಜಿಲ್ಲೆಯ ಕ್ರಿಯಾಶೀಲ 42 ಎಸ್ಡಿಎಂಸಿ ಗಳನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮವು ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಬಿದ್ರೆ ಮೈನ್ ನಲ್ಲಿ ನಡೆಯಿತು ಆಮಂತ್ರಣ ಪತ್ರಿಕೆಯನ್ನು ಮೂಡಬಿದ್ರೆ ತಾಲೂಕಿನ ಶಿಕ್ಷಣಾಧಿಕಾರಿ ವೈ ಗಣೇಶ್ ರವರು ನಿರ್ವಹಿಸಿ ಕಾರ್ಯಕ್ರಮಕ್ಕೆ ಎಲ್ಲಾ ಎಸ್ಡಿಎಂಸಿ ಗಳ ಸದಸ್ಯರು ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು, ಹಾಗೂ ಶುಭ ಹಾರೈಸಿದರು. ಮೊಯಿದಿನ್ ಕುಟ್ಟಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ಯವರು ಈ ಕಾರ್ಯಕ್ರಮದ ಬಗ್ಗೆ,ಹಾಗೂ ಎಸ್ಡಿಎಂಸಿ ಗಳ ಕರ್ತವ್ಯಗಳ ಬಗ್ಗೆ ಚುಟುಕಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕರು ಹಾಗೂ ಮೂಡಬಿದ್ರಿ ಮೈನ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾದ ಚಂಚಲಾಕ್ಷಿ ಯವರುಉಪಸ್ಥಿತರಿದ್ದರು ಮೂಡಬಿದ್ರಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ನಾಗವೇಣಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಸ್ಥಳೀಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಆದರ್ಶ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ,ಎಲ್ಲಾ ಎಸ್ಡಿಎಂಸಿ ಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನೀಡಿದರು . ದ.ಕ.ಜಿಲ್ಲಾ ಎಸ್ಡಿಎಂಸಿ ಉಪಾಧ್ಯಕ್ಷರಾದ ಉಮ್ಮರ್ ಫಾರೂಕ್ ಜಿಲ್ಲಾ ಸದಸ್ಯರಾದ ಉಸ್ಮಾನ್ ನೆಕ್ಕೀಲು ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 20 ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವು ಯಶಸ್ವಿ ಆಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.