(www.vknews.in) ; ಯಾವುದೇ ಜಾತಿ ಮತ ಧರ್ಮ ನೋಡದೇ, ಎಲ್ಲಾ ಮಕ್ಕಳನ್ನೂ ತನ್ನ ಮಕ್ಕಳಂತೆಯೇ ಭಾವಿಸಿ ,ಕಳೆದ ಹಲವು ವರ್ಷಗಳಿಂದೀಚೆಗೆ ಶೈಕ್ಷಣಿಕ ಕಾರ್ಯಾಗಾರ ನಡೆಸಿ ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುತ್ತಿರುವ , ಮಾತು ಮಾತಿಗೂ ಹಿಂದು ಮುಸ್ಲಿಂ ಸೌಹಾರ್ಧತೆಯ ಅಗತ್ಯತೆಯನ್ಬು ಜನರಿಗೆ ತಿಳಿಸಿ ಕೊಡುತ್ತಿರುವ ಶಾಂತಿ, ಪ್ರೀತಿಯ ರಾಯಭಾರಿ ಎಂದೇ ಖ್ಯಾತರಾದ ರಫೀಕ್ ಮಾಸ್ಟರ್ ಆತೂರು ಇವರನ್ನು ತಿಳಿಯದವರು ವಿರಳ.
ತನ್ನ ಹಿರಿಯ ಮಗ ಸ್ವರೂಪ್ ರಿಗೆ ನೀಡಿದ ತರಬೇತಿಯಿಂದಾಗಿ ಅತೀ ಸಣ್ಣ ಪ್ರಾಯ ದಲ್ಲೇ ಕಂಪ್ಯೂಟರ್ ಜ್ಞಾನ ಸಿದ್ದಿಸಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾದವರು ರಪೀಕ್ ಮಾಸ್ಟರ್ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಇವರನ್ನು ತನ್ನ ಆಸ್ಥಾನದಲ್ಲಿ ಸನ್ಮಾನ ಕೂಡಾ ಮಾಡಿದ್ದರು. ಅಂತಹ ರಪೀಕ್ ಮಾಸ್ಟರ್ ರ ವಿರುದ್ದ ಈಗ ಪೋಲೀಸ್ ಠಾಣೆಯಲ್ಲಿ ಎಪ್ ಐ ಆರ್ ದಾಖಲಿಸಲಾಗಿದೆ. ಇದರ ಕಾರಣ ಮಾತ್ರ ವಿಚಿತ್ರವಾಗಿದೆ.
ಅಡ್ಯನಡ್ಕ ಸಮೀಪದ ಮೂರು ಜಮಾತರು ಸೇರಿ ಎಸ್ಸೆಸ್ಸೆಲ್ಸಿ ಬರೆಯಲಿರುವ ಎಲ್ಲಾ ಜಾತಿ ಧರ್ಮದ ಮಕ್ಕಳಿಗೆ ಪರೀಕ್ಷೆಯ ಪೂರ್ವ ಸಿದ್ದತೆಯ ಕಾರ್ಯಾಗಾರ ವೊಂದನ್ನು ರಫೀಕ್ ಮಾಸ್ಟರ್ ಮೂಲಕ ನಡೆಸಲು ಮುಂದಾಗಿದ್ದು ಮಕ್ಕಳು ಕೂಡಾ ಧರ್ಮಾತೀತವಾಗಿ ಭಾಗವಹಿಸಿದ್ದರು. ಇದನ್ನು ಸಹಿಸದ ನಾಮ ದಾರಿ ಹಿಂದೂ ಗಳು ಅಶಾಂತಿಗೆ ಎಡೆಮಾಡಿಕೊಡುತ್ತಾರೆ ಎಂದು ಬಜ್ಪೆ ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಇದರ ಅಧ್ಯಕ್ಷ ಹುಸೇನ್ ಸರೀಫ್ ಪ್ಯಾರಾ ಹಾಗೂ ರಫೀಕ್ ಸುರಲ್ಪಾಡಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.