(www.vknews.in) : ಶತಮಾನಗಳಿಂದ ತುಳುನಾಡ ಜನರು ಆರಾಧಿಸುತ್ತಾ ಬಂದಿರುವ ನಾಗಬನ, ಪಂಜುರ್ಲಿ ದೈವಗಳ ಹೆಸರಲ್ಲಿ ತನ್ನ ರಾಜಕೀಯ ತೆವಳು ತೀರಿಸುವ ಸಿ.ಟಿ ರವಿಯವರ ನಡೆಯು ತುಳುನಾಡ ಜನರಿಗೆ ಅತ್ಯಂತ ನೋವನ್ನು ತಂದಿದೆ. ಆಚಾರ ವಿಚಾರವಿಲ್ಲದ ಜನರಿಂದ ಮಾತ್ರ ಇಂತಹ ನಡೆಯನ್ನು ನಿರೀಕ್ಷೆ ಮಾಡಬಹುದು. ಅದೇ ರೀತಿ ತುಳು ಭಾಷೆಯ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ ಮಾಧುಸ್ವಾಮಿಯವರು ಕೂಡ ತಮ್ಮ ನೈಜ ಸ್ವಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ರೀತಿಯ ರಾಜಕಾರಣವು ಅತ್ಯಂತ ಕೀಳು ಮಟ್ಟದ್ದಾಗಿದೆ. ಇದರ ಗಂಭೀರ ಪರಿಣಾಮವನ್ನು ಬರುವ ಚುನಾವಣೆಯಲ್ಲಿ ಎದುರಿಸಬೇಕಾದಿತು ಎಂದು ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ಅಧ್ಯಕ್ಷೆಯಾದ ಡಾ ಸುಮತಿ ಎಸ್ ಹೆಗ್ಡೆ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.