(www.vknews.in) : ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿವರಾದ ಮೈಬೂಬಸಾಹೇಬ ಅವರು ಸುಮಾರು ವರ್ಷಗಳಿಂದ ಕನ್ನಡ ನಾಡು ನುಡಿಗಾಗಿ ದುಡಿಯುತ್ತಿದ್ದಾರೆ. ಬಂಡಾಯಗೀತೆಗಳು & ಸಾವಿರಕ್ಕೂ ಹೆಚ್ಚು ಗಜಲ್ ಬರೆದು ಪ್ರಕಟಿಸಿದ್ದಾರೆ. ಓದುಗದೊರೆ ಮತ್ತು ಸತ್ಯ ಸಂಗತಿ ದಿನ ಪತ್ರಿಕೆಯಲ್ಲಿ ಅಂಕಣ & ಲೇಖನಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ.
ಬಂಡಾಯಗೀತೆಗಳು ಮತ್ತು ದೇವರಮಗ ಎನ್ನುವ ಬಿಡಿಕಥೆಗೆ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಮೈಬೂಬಸಾಹೇಬ.ವೈ.ಜೆ.ರವರ ಈವರೆಗಿನ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಸಾಲಿನ ಖಿದ್ಮಾ ಕಾವ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು Khidma foundation of karnataka(R) ದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಮೀರ ಬನ್ನೂರ ಪತ್ರಿಕಾ ಹೇಳಿಕೆ ನೀಡಿದ್ದು, ಮಾರ್ಚ್-೫ರಂದು ಧಾರವಾಡದಲ್ಲಿ ನಡೆಯುವ ಕಾವ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.