(ವಿಶ್ವ ಕನ್ನಡಿಗ ನ್ಯೂಸ್) : ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ಜಿಎಸ್ಟಿ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಗುಮಾಸ್ತ ವಸಂತ್ ರಾಥೋಡ್ ಅವರು ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಅಹಮದಾಬಾದ್ಗೆ ಸಮೀಪದಲ್ಲಿರುವ ಭದಾಜ್ನಲ್ಲಿರುವ ದಂತ ವೈದ್ಯಕೀಯ ಕಾಲೇಜಿನ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಹತ್ತು ದಿನಗಳೊಳಗೆ ಗುಜರಾತ್ನಲ್ಲಿ ಈ ರೀತಿಯ ಮೂರನೇ ಘಟನೆ ಸಂಭವಿಸಿದೆ.
ಘಟನೆ ನಡೆದಾಗ ರಾಥೋಡ್ ಫೀಲ್ಡಿಂಗ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇತರ ಆಟಗಾರರು ಅವರ ನೆರವಿಗೆ ಧಾವಿಸಿದರು ಎಂದು ಎಸ್ಜಿಎಸ್ಟಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಾಥೋಡ್ ಅವರನ್ನು ಆರಂಭದಲ್ಲಿ ಪಂದ್ಯ ನಡೆಯುತ್ತಿದ್ದ ಡೆಂಟಲ್ ಕಾಲೇಜಿಗೆ ದೌಡಾಯಿಸಲಾಯಿತು. ಅವರ ಆಮ್ಲಜನಕದ ಮಟ್ಟವು ಕುಸಿಯುತ್ತಲೇ ಇದ್ದುದರಿಂದ ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು.
ರಾಥೋಡ್, ವಸ್ತ್ರಾಪುರ ನಿವಾಸಿಯಾಗಿದ್ದು, ಅಹಮದಾಬಾದ್ನಲ್ಲಿರುವ ಎಸ್ಜಿಎಸ್ಟಿ ಕೇಂದ್ರ ಕಚೇರಿಯಲ್ಲಿ ಘಟಕ 14 ರಲ್ಲಿ ನಿಯೋಜನೆಗೊಂಡಿದ್ದಾರೆ. ಅವರು ತಮ್ಮ ಪತ್ನಿಯನ್ನು ಅಗಲಿದ್ದಾರೆ. ಕಳೆದ ವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ರಾಜ್ಕೋಟ್ ನಿವಾಸಿ 27 ವರ್ಷದ ಪ್ರಶಾಂತ್ ಭರೋಲಿಯಾ ಮತ್ತು ಸೂರತ್ ನಿವಾಸಿ 31 ವರ್ಷದ ಜಿಗ್ನೇಶ್ ಚೌಹಾನ್ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇಬ್ಬರೂ ಎದೆನೋವು ಅನುಭವಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
અમદાવાદમાં ક્રિકેટ મેચ દરમિયાન ગ્રાઉન્ડ પર GST અધિકારી ઢળી પડ્યા, જુઓ (LIVE દ્રશ્યો)#ahemdabad #bhadaj #Cricket #heartattck #gstofficer pic.twitter.com/bENl6UCcmp — Watch Gujarat (@WatchGujarat) February 26, 2023
અમદાવાદમાં ક્રિકેટ મેચ દરમિયાન ગ્રાઉન્ડ પર GST અધિકારી ઢળી પડ્યા, જુઓ (LIVE દ્રશ્યો)#ahemdabad #bhadaj #Cricket #heartattck #gstofficer pic.twitter.com/bENl6UCcmp
— Watch Gujarat (@WatchGujarat) February 26, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.