ಕೀವ್ (ವಿಶ್ವ ಕನ್ನಡಿಗ ನ್ಯೂಸ್) : ಯುದ್ಧಪೀಡಿತ ಉಕ್ರೇನ್ ಗೆ ಸೌದಿ ಅರೇಬಿಯಾ 400 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು 2022 ರ ಅಕ್ಟೋಬರ್ನಲ್ಲಿ ಉಕ್ರೇನ್ ಅಧ್ಯಕ್ಷರೊಂದಿಗೆ ದೂರವಾಣಿ ಕರೆಯಲ್ಲಿ ಉಕ್ರೇನ್ಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಈಗ ನನಸಾಗಿದೆ.
ಸಹಿ ಸಮಾರಂಭದಲ್ಲಿ ಸೌದಿ ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಮತ್ತು ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರೆ ಯೆರ್ಮಾಕ್ ಉಪಸ್ಥಿತರಿದ್ದರು. ಈ ಒಪ್ಪಂದವು ಉಕ್ರೇನ್ ಗೆ 100 ಮಿಲಿಯನ್ ಡಾಲರ್ ಮಾನವೀಯ ನೆರವು ನೀಡುವ ಜಂಟಿ ಸಹಕಾರವನ್ನು ಸಹ ಒಳಗೊಂಡಿದೆ.
ಈ ತಿಳುವಳಿಕಾ ಒಡಂಬಡಿಕೆಗೆ ರಾಜ ಸಲ್ಮಾನ್ ಮತ್ತು ಪರಿಹಾರ ಕೇಂದ್ರದ ಸೂಪರ್ ವೈಸರ್ ಜನರಲ್ ಅಬ್ದುಲ್ಲಾ ಅಲ್ ರಬಿಯಾ ಮತ್ತು ಉಕ್ರೇನ್ ಉಪ ಪ್ರಧಾನಿ ಒಲೆಕ್ ಸಂದಾರ್ ಕುಬ್ರಾಕೊವ್ ಸಹಿ ಹಾಕಿದರು. ಭಾನುವಾರ ಕೀವ್ ಗೆ ಆಗಮಿಸಿದ ರಾಜಕುಮಾರ ಫೈಸಲ್ ಅವರನ್ನು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಜೆಲೆನ್ಸ್ಕಿ ಸ್ವಾಗತಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.