ರಿಯಾದ್/ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಭಾಗವಾಗಿ, ಭಾರತೀಯ ವಾಯುಪಡೆಯ ಎಂಟು ವಿಮಾನಗಳು 145 ಸಿಬ್ಬಂದಿಯೊಂದಿಗೆ ಸೌದಿ ಅರೇಬಿಯಾಕ್ಕೆ ಬಂದಿಳಿದಿವೆ. 05 ಮಿರಾಜ್, 02 ಸಿ -17 ಮತ್ತು 01 ಐಎಲ್ -78 ಟ್ಯಾಂಕರ್ ಗಳೊಂದಿಗೆ 145 ವಾಯು ಯೋಧರ ಭಾರತೀಯ ತುಕಡಿ ರಾಯಲ್ ಸೌದಿ ವಾಯುಪಡೆ ನೆಲೆಗೆ ಬಂದಿಳಿದಿದೆ.
ವಾಯುಪಡೆಯ ಅಧಿಕಾರಿಗಳು, ಸೌದಿ ಅರೇಬಿಯಾದಲ್ಲಿನ ಭಾರತೀಯ ರಾಯಭಾರಿ ಡಾ. ಸುಹೇಲ್ ಅಜಾಜ್ ಖಾನ್, ರಕ್ಷಣಾ ರಾಯಭಾರಿ ಕರ್ನಲ್ ಜಿಎಸ್ ಗ್ರೆವಾಲ್ ಮತ್ತು ರಾಯಭಾರ ಕಚೇರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ನಂತರ ತಂಡವು ಸೌದಿ ವಾಯುಪಡೆಯ ಬೇಸ್ ಕಮಾಂಡರ್ ಅವರನ್ನು ಭೇಟಿ ಮಾಡಿತು.
ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲಿ ಸೌದಿ ಅರೇಬಿಯಾ ಕೂಡ ಭಾಗವಹಿಸಿತ್ತು. ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ಬಲವಾದ ಬಾಂಧವ್ಯವನ್ನು ಹೊಂದಿವೆ. ಸೌದಿ ಅರೇಬಿಯಾ ಭೇಟಿಯ ನಂತರ, ಯುಕೆಯಲ್ಲಿ ನಡೆಯಲಿರುವ ಕೋಬ್ರಾ ವಾರಿಯರ್ 23 ವ್ಯಾಯಾಮದಲ್ಲಿ ಭಾಗವಹಿಸಲು ಭಾರತೀಯ ತಂಡವು ತೆರಳಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.