(www.vknews.in) ; ಕನ್ನಡ ಸಾಹಿತ್ಯ ಪರಿಷತ್ ಕೇಂದ್ರಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಪ್ರಥಮಬಾರಿ ಕಾಸರಗೋಡಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕ ಸಾ ಪ ಕೇರಳ ಗಡಿನಾಡ ಘಟಕದ ಕಛೇರಿಗೆ ಆಗಮಿಸಿದ ಅವರನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು. ಘಟಕದ ಕಾರ್ಯಕ್ರಮಗಳ ವಿವರಗಳನ್ನು ಪರಿಶೀಲಿಸಿದ ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರೂ ನಿಕಟ ಪೂರ್ವ ಅಧ್ಯಕ್ಷ ರಾದ ನ್ಯಾಯವಾದಿ ಐ ವಿ ಭಟ್ ಮತ್ತು ನಿಕಟ ಪೂರ್ವ ಗೌರವ ಕೋಶಾಧ್ಯಕ್ಷ ಸುಕುಮಾರ್ ಆಲಂಪಾಡಿ ಅವರನ್ನು ಶಾಲು ಹೊದಿಸಿ ಗೌರವಿಸಿದರು .ಕ ಸಾ ಪ ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ ಮುರಳೀ ಮೋಹನ್ ಚೂಂತಾರು, ಡಾ ಜಯಪ್ರಕಾಶ ತೊಟ್ಟೆತ್ತೋಡಿ,ಡಾ ರಾಜಗೋಪಾಲ್ ಕಾಸರಗೋಡು,ಡಾ ಪ್ರಸನ್ನ ರೈ, ಗಣೇಶ್ ಪಾಣೂರು, ಪಿ ರಾಮಚಂದ್ರ ಭಟ್ ಧರ್ಮತ್ತಡ್ಕ,ಮುಂತಾದವರು ಉಪಸ್ಥಿತರಿದ್ದರು. ತದನಂತರ ಡಾ ಜೋಷಿ ಅವರು ಅಸೌಖ್ಯದಿಂದಿರುವ ಕ ಸಾ ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಎಸ್ ವಿ ಭಟ್ ಅವರ ಮನೆಗೆ ತೆರಳಿ ಆರೋಗ್ಯ ಬಗ್ಗೆ ವಿಚಾರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.