(www.vknews.in) ; ಮುಲ್ಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿರಂತರ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನರು ನೀರಿನ ಅಭಾವದಿಂದ ಸಮಸ್ಯೆ ಅನುಭವಿಸುವುದನ್ನು ಮನಗಂಡು ಎಸ್.ಡಿ.ಪಿ.ಐ ಮುಲ್ಕಿ ಪಟ್ಟಣ ಪಂಚಾಯತ್ ಸಮಿತಿ ವತಿಯಿಂದ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನೀರಿನ ಸಮಸ್ಯೆಗೆ ಪರಿಹಾರಕ್ಕಾಗಿ ಹಲವು ಬಾರಿ ಮನವಿ ಮಾಡಿದರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕೊನೆಯ ಎಚ್ಚರಿಕೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ನೀಡುತ್ತಿದ್ದು. ಈ ಸಮಸ್ಯೆ ಪರಿಹಾರ ವಾಗದಿದ್ದಲ್ಲಿ ಉಗ್ರ ಹೋರಾಟ ನಡೆಸುವೆವು ಎಂದು ಮುಲ್ಕಿ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ಯು.ಕೆ. ಕೊಳ್ನಾಡ್ ರವರು ತಿಳಿಸಿದ್ದಾರೆ.
ನಿಯೋಗದಲ್ಲಿ ಮುಲ್ಕಿ ಪಟ್ಟಣ ಪಂಚಾಯತ್ ಸಮಿತಿಯ ನಾಯಕರಾದ ಮುಸ್ತಾಕ್, ಮುಝಮ್ಮಿಲ್, ಹಾರೀಸ್, ಅಸದ್ ಹಾಗೂ ಸಮದ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.