(www.vknews.in) ; ಭದ್ರಾವತಿ ಸಮೀಪದ ಕಡದಕಟ್ಟೆ ನವಚೇತನ ಅನುದಾನಿತ ಕನ್ನಡ ಹಿ.ಪ್ರಾ.ಶಾಲೆಯಲ್ಲಿ ದಿನಾಂಕ :-28-02-2023 ನೇ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನಚಾರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಸ್ತು ಪ್ರದರ್ಶನ ವೀಕ್ಷಣೆಗೆ ನವಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಸ್.ವಿವೇಕ್ ರವರು ಚಾಲನೆ ನೀಡಿದರು.
ಶಿಕ್ಷಕರಾದ ಶ್ರೀ ಸಿ.ಎಚ್.ನಾಗೇಂದ್ರಪ್ಪ ರವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಆಕರ್ಷಕ ವಿಜ್ಞಾನ ಮಾದರಿ ತಯಾರಿಸಿದ್ದರು. ಶಾಲಾ ವಿದ್ಯಾರ್ಥಿಗಳು ಕೆ.ಜಿ.ಆರ್.ಪ್ರೌಢಶಾಲೆಯ ಮತ್ತು ನವಚೇತನ ಆಂಗ್ಲ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು,ಪೋಷಕರು ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿದರು. ಅತ್ಯುತ್ತಮವಾಗಿ ವಿಜ್ಞಾನ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ನವಚೇತನ ಆಡಳಿತ ಮಂಡಳಿಯಿಂದ ಬಹುಮಾನ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಎನ್.ಆರ್ ಪ್ರಕಾಶ್, ಶ್ರೀಮತಿ ಕೆ.ಮಮತ ಮತ್ತು ದೈಹಿಕ ಶಿಕ್ಷಕರಾದ ಶ್ರೀ ಅಬ್ದುಲ್ ಹಕ್ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.