(www.vknews.in) ; ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 4ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜನೆ ಮಾಡಲಾಗಿರುವ ರಾಜ್ಯ ಮಟ್ಟದ ಖಿದ್ಮಾ ಕವಿ-ಕಾವ್ಯ ಸಂಗಮ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 5 ಭಾನುವಾರದಂದು ಧಾರವಾಡದ ರಂಗಾಯಣದಲ್ಲಿ ನಡೆಯಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ 50 ರಷ್ಟು ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಲಿರುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಖಿದ್ಮಾ ಸೇವಾ ರತ್ನ ಪ್ರಶಸ್ತಿ, ಖಿದ್ಮಾ ಕಾವ್ಯ ಪ್ರಶಸ್ತಿ ಹಾಗೂ ಖಿದ್ಮಾ ಆದರ್ಶ ದಂಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಖಿದ್ಮಾ ಕವಿ ಕಾವ್ಯ ಸಂಗಮದ ಆಯೋಜಕ ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.