ಆತೂರು (ವಿಶ್ವ ಕನ್ನಡಿಗ ನ್ಯೂಸ್) : ಆತೂರು ಏಲ್ಯಂಗ ನಿವಾಸಿಯಾಗಿರುವ ಹಾಗೂ ಬದ್ರಿಯಾ ಮಸೀದಿಯ ಕಟ್ಟಡ ಪುನರ್ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಜಮಾಅತ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಗೈದ ಹಾಗೂ ಕೊಯಿಲ ಗ್ರಾಮ ಪಂಚಾಯತ್ ಮಾಜಿ ಚಯರ್ಮೇನ್ ರಾಗಿ ಮತ್ತು ಮಂಡಲ ಪಂಚಾಯತ್ ಸದಸ್ಯರಾಗಿ ಸೇವೆಗೈದ ಕೆ.ಎ.ಅಬುಬಕ್ಕರ್ ಹಾಜಿಯವರು ಇದೀಗ ಅವರ ಆತೂರಿನ ಮನೆಯಲ್ಲಿ ನಿಧನರಾದರು.
ಇವರು ಆತೂರು ಬದ್ರಿಯಾ ಸ್ಕೂಲ್ ನ ಪ್ರ.ಕಾರ್ಯದರ್ಶಿ ಕೆ.ಎ.ಯಹ್ಯಾ ಮತ್ತು ಗಲ್ಫ್ ಉದ್ಯೋಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆಗೈಯ್ಯುತ್ತಿರುವ ಕೆ.ಎ.ಅಬ್ದುಲ್ ಅಝೀಝ್ ರವರ ತಂದೆ. ಎಸ್ವೈಎಸ್ ದ.ಕ. ಈಸ್ಟ್ ಜಿಲ್ಲಾ ಕೋಶಾಧಿಕಾರಿ ಜಿ. ಮುಹಮ್ಮದ್ ಕುಂಞಿರವರ ಭಾವ ಹಾಗೂ ಮೀಡಿಯಾ ವಿಂಗ್ ಆತೂರ್ ಇದರ ಅಡ್ಮಿನ್, SKSSF ವಿಖಾಯ ಈಸ್ಟ್ ಜಿಲ್ಲೆ ವೈಸ್ ಕನ್ವಿನರ್ ಮುನೀರ್ ಆತೂರು ರವರ ಅಜ್ಜ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.