(www.vknews.in) ; ಕರ್ನಾಟಕ ಮುಸ್ಲಿಂ ಜಮಾಅತ್ ಇದರ ನೂತನ ಎಲಿಮಲೆ ಶಾಖಾ ಘಟಕವನ್ನು ಇತ್ತೀಚೆಗೆ ನಡೆದ ಎಸ್ ವೈ ಎಸ್ ಮಹಾಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಎಸ್ ವೈ ಎಸ್ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಂಗಮದಲ್ಲಿ ರಾಜ್ಯ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಚುನಾವಣಾ ವೀಕ್ಷಕರಾಗಿ ಆಗಮಿಸಿ ನೂತನ ಸಮಿತಿಯನ್ನು ಆರಿಸಿದರು. ಮಹಮೂದ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.
ಸೂಫಿ ಮುಸ್ಲಿಯಾರ್ (ಅಧ್ಯಕ್ಷರು), ಮಹಮೂದ್ ಮುಸ್ಲಿಯಾರ್ (ಪ್ರ.ಕಾರ್ಯದರ್ಶಿ), ಅಬ್ದುಲ್ ಖಾದರ್ ಪಾಣಾಜೆ (ಕೋಶಾಧಿಕಾರಿ), ಉಪಾಧ್ಯಕ್ಷರಾಗಿ ಅಬ್ದುಲ್ಲ ಜಿ. ಎ.ಕೆ, ಹಸೈನಾರ್ ಕೆ. ಎಚ್, ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಹಾಜಿ ಹಾಗೂ ಅಬ್ದುಲ್ ಖಾದರ್ ಎ. ಎಂ ಹಾಗೂ ಸದಸ್ಯರಾಗಿ ಅಹಮದ್ ಕುಂಞ ಎ ಎಂ, ಇಬ್ರಾಹಿಂ ಪಿ. ಎಂ, ಮೊಹಮ್ಮದ್ ಜಿ. ಎಸ್ ಆಯ್ಕೆಯಾದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.