(ವಿಶ್ವ ಕನ್ನಡಿಗ ನ್ಯೂಸ್) : ಮಹಾರಾಷ್ಟ್ರದಲ್ಲಿ 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋ ನೋಡಿ ಜನ್ಮ ನೀಡಿದ ನಂತರ ತನ್ನ ಮಗುವನ್ನು ಕೊಂದಿದ್ದಾಳೆ. ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಲೈಂಗಿಕ ಶೋಷಣೆಗೆ ಬಲಿಯಾದ 15 ವರ್ಷದ ಬಾಲಕಿ ಮಾರ್ಚ್ 2 ರಂದು ಮನೆಯಲ್ಲೇ ಹೆರಿಗೆ ಮಾಡಿದ್ದಳು.
ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರು ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ತನಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಬಾಲಕಿ ತಾಯಿಯಿಂದ ಗರ್ಭಧಾರಣೆಯನ್ನು ಮರೆಮಾಚಿದ್ದಳು. ಘಟನೆ ತಿಳಿಯಬಾರದೆಂದು ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾಳೆ.
ಇದಕ್ಕಾಗಿ ಯೂಟ್ಯೂಬ್ ವಿಡಿಯೋ ನೋಡಿ ವಿಷಯಗಳನ್ನು ಕಲಿತಿದ್ದಾಳೆ. ಮಾರ್ಚ್ 2 ರಂದು 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನವಜಾತ ಶಿಶುವನ್ನು ತಕ್ಷಣವೇ ಕತ್ತು ಹಿಸುಕಿ ಸಾಯಿಸಲಾಯಿತು. ಶವವನ್ನು ಮನೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದರು.
ಈ ವಿಚಾರ ತಿಳಿದ ತಾಯಿ 15 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನವಜಾತ ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.