ಬಾಗಲಕೋಟೆ (ವಿಶ್ವ ಕನ್ನಡಿಗ ನ್ಯೂಸ್) : ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಮಗ ದಶರಥ ದುರ್ವೆ (60), ತಾಯಿ ಶಾವಕ್ಕ ದುರ್ವೆ (90) ಮೃತ ದುರ್ದೈವಿಗಳು.
ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ಮಗ ದಶರಥ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ದುಃಖಿತರಾಗಿದ್ದ ತಾಯಿ, ಮಗನ ಅಗಲಿಕೆ ನೋವು ಸಹಿಸದೇ ಹೃದಯಾಘಾತದಿಂದ ಸಂಜೆ ಸಾವನ್ನಪ್ಪಿದರು. ಸಾವಿನಲ್ಲೂ ಒಂದಾದ ತಾಯಿ-ಮಗ ಅಂತ್ಯಕ್ರಿಯೆಯನ್ನು ಒಟ್ಟಿಗೇ ನಡೆಸಲಾಯಿತು. ತಾಯಿ ಮಗನ ಸಾವು ಕಂಡು ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದ್ದಾರೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.