(www.vknews.in) ; ಸ್ಟುಡೆಂಟ್ಸ್ ಫಾರ್ ನೇಷನ್ ಹಾಗೂ ಅಚೀವರ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ “ವಿ.ದ ಯೂತ್” ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವಕ ಯುವತಿಯರೊಂದಿಗೆ ಸಂವಾದದಲ್ಲಿ ಮಾತನಾಡಿದ ಶಾಸಕ ಪ್ರೀತಂ ಜೆ ಗೌಡ ಯುವಜನತೆಯ ಪಾತ್ರ ಸಮಾಜದ ಧನಾತ್ಮಕ ಬದಲಾವಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದುಅಭಿಪ್ರಾಯಪಟ್ಟರು.
ಸಂವಾದದಲ್ಲಿ ನೂರಾರು ಯುವಕ ಯುವತಿಯರು ಹಾಸನದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮದೇ ಆದ ಪ್ರಶ್ನೆಗಳನ್ನು ಕೇಳುವ ಮುಖಾಂತರ ಶಾಸಕರ ಯೋಜನೆಗಳಬಗ್ಗೆ ಮಾಹಿತಿಪಡೆದರು,80 ಅಡಿ ರಸ್ತೆಯ ಮೂಲಕ ರಿಂಗ್ ರಸ್ತೆ ಮಾರ್ಗ ಬಸ್ ವ್ಯವಸ್ಥೆ ಸೇರಿದಂತೆ,ಸ್ಪರ್ದಾತ್ಮಕ ಪರೀಕ್ಷೆಗೆ ಸಹಕಾರಿಯಾಗುವಂತೆ ಹಾಸನದ ನಾಲ್ಕು ಭಾಗಗಳಲ್ಲಿ ಗ್ರಂಥಾಲಯ ವ್ಯವಸ್ಥೆಯ ಮಹತ್ವದ ಬಗ್ಗೆ ಹಾಗೂ ಇನ್ನಿತರ ಪ್ರಶ್ನೆಗಳು ಸಭಿಕರ ಗಮನ ಸೆಳೆದವು. ಹಾಗೂ ನೆರೆದಿದ್ದ ಯುವಜನತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮುಖಾಂತರ ಶಿಕ್ಷಣಕ್ಕಿರುವ ಮಹತ್ವವನ್ನು ತಿಳಿಸಿಕೊಟ್ಟರು ಸಂವಾದದಲ್ಲಿ ಆಯೋಜಕರಾದ ಪದ್ಮನಾಭ್ ಕೆ ಗೌಡ,ಮಲ್ಲಿಕಾರ್ಜುನ ಸ್ವಾಮಿ,ಚೇತನ್ ಹೆಚ್.ವಿ.ಝುಲ್ಫಿಕರ್ ಅಹಮದ್,ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.