(www.vknews.in) ; ದಿನಾಂಕ 13.2.2023 ರಿಂದ ಬೆಂಗಳೂರು ಮಹಾನಗರದ ಸ್ವತಂತ್ರ ಉದ್ಯಾನವನದಲ್ಲಿ ನಡೆಸಲಾಗುತ್ತಿರುವ ಎನ್.ಎಚ್.ಎಮ ಒಳಗುತ್ತಿಗೆ ನೌಕರರ ಕಾಯಮಾತಿ ಬೇಡಿಕೆಯೊಂದಿಗೆ, ಅನಿರ್ದಿಷ್ಟಾವಧಿ ಮುಷ್ಕರ ಇವತ್ತಿಗೆ 23ನೇ ದಿನಕ್ಕೆ ಕಾಲಿಡುತ್ತಿದ್ದು, ದಿನೇ ದಿನೇ ಮುಷ್ಕರದ ತೀವ್ರತೆ ಹೆಚ್ಚುತ್ತಿರುವುದನ್ನು ಗಮನಿಸಿ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿರುವುದು ನಮಗೆಲ್ಲ ಸಂತೋಷದ ವಿಷಯವಾಗಿರುತ್ತದೆ. ದಿನೇ ದಿನೇ ಆಗುತ್ತಿರುವ ಉತ್ತಮ ಬೆಳವಣಿಗೆಗಳನ್ನು ಸಹಿಸದ ಕೆಲವು ಜನ ಸಂಘಟನೆಯನ್ನು ದುರ್ಬಲಗೊಳಿಸಲು, ಸಂಚು ರೂಪಿಸಿ, ನಮ್ಮನ್ನು ತಪ್ಪುದಾರಿಗೆ ಒಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ.
ದಯಮಾಡಿ ಅದಕ್ಕೆ ಯಾರೂ, ಗೊಂದಲಕ್ಕೆ ಒಳಗಾಗದೆ, ಧೃತಿಗೆಡದೇ ಪ್ರತಿ ಎನ್.ಎಚ್.ಎಮ್ ಒಳಗುತ್ತಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು, ನಮ್ಮ ಕಾಯಮಾತಿ ಬೇಡಿಕೆ ಈಡೇರಿಕೆಯ ಅಧಿಕೃತ ಆದೇಶ ಸರ್ಕಾರದಿಂದ ಸಿಗುವವರೆಗೆ ಇದೇ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋದಲ್ಲಿ ಮಾತ್ರ ನಮಗೆ ಯಶಸ್ಸು ಸಿಗುವುದು ಖಚಿತ ಇದರಲ್ಲಿ ಯಾವುದೇ ಸಂದೇಹವಿಲ್ಲ. ಕೆಲವು ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಳ್ಳದೇ ನಿರಾಸಕ್ತಿ ತೋರಿಸುತ್ತಿರುವುದು ಇದು ನಿಮಗೆ ನೀವೇ ಆತ್ಮ ವಂಚನೆ ಮಾಡಿಕೊಂಡಂತೆ. ಸರ್ಕಾರದ ಮಟ್ಟದಲ್ಲಿ ಇಷ್ಟೆಲ್ಲ ಬೆಳವಣಿಗೆಗಳನ್ನು ಕಂಡಾದರೂ, ಕಡ್ಡಾಯವಾಗಿ ಈ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಈ ಮುಖಾಂತರ ತಿಳಿಸಲಾಗಿರುತ್ತದೆ.
ನಾಳೆ ಮತ್ತು ನಾಡಿದ್ದು, ಎರಡು ದಿನಗಳು ಪ್ರಮುಖವಾದ ನಿರ್ಣಾಯಕ ದಿನಗಳಾಗಿರುತ್ತವೆ ನಮ್ಮ ಭವಿಷ್ಯ ಬದಲಾವಣೆಯ ದಿನಗಳಾಗಿರುತ್ತವೆ.ಇಂತಹ ಸಂದರ್ಭದಲ್ಲಿ ನಮ್ಮ ಪ್ರತಿ ಎನ್. ಎಚ್.ಎಮ್ ಒಳಗುತ್ತಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲೇ ಬೇಕಾದ ಅನಿವಾರ್ಯತೆ ಇದೆ. ಇದರ ಬಗ್ಗೆ ಯಾರು ಕೂಡ ಹಗುರವಾಗಿ ತಿಳಿದುಕೊಳ್ಳದೇ ಗಂಭೀರವಾಗಿ ಯೋಚಿಸಿ, ಯಾವುದು ಸರಿ ಯಾವುದು ತಪ್ಪು ಎನ್ನುವ ವಿವೇಚನಾ ಶಕ್ತಿ ಪ್ರತಿಯೊಬ್ಬರಲ್ಲಿ ಇರುತ್ತದೆ. ಇದಕ್ಕಿಂತ ಹೆಚ್ಚಿನದಾಗಿ ಏನು ಹೇಳಲು ಆಗುವುದಿಲ್ಲ ಎಂದು ಮುಷ್ಕರ ನಿರತ ಕಾರ್ಯಕರ್ತರು ವಿನಂತಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.