ಮಂಜೇಶ್ವರಂ (ವಿಶ್ವ ಕನ್ನಡಿಗ ನ್ಯೂಸ್) : ದೆಹಲಿಯಲ್ಲಿ ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರಂ ಮೂಲದವನನ್ನು ಎನ್ಐಎ ಬಂಧಿಸಿದೆ. ಮಂಜೇಶ್ವರಂ ಕುಂಚತ್ತೂರಿನ ಮೊಹಮ್ಮದ್ ಅಬಿದ್ (42) ಎಂಬಾತನನ್ನು ಎನ್ ಐಎ ಬಂಧಿಸಿದೆ. ಮೊಹಮ್ಮದ್ ಅಬಿದ್ ದೆಹಲಿಯಲ್ಲಿ ತಿಂಗಳ ಹಿಂದೆ ದಾಖಲಾದ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ನಂತರ ಅಬಿದ್ ಅಲ್ಲಿಂದ ನಾಪತ್ತೆಯಾಗಿದ್ದರು. ಪ್ರಕರಣದಲ್ಲಿ ಅಬಿದ್ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಎನ್ಐಎಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಇಲ್ಲಿಗೆ ಆಗಮಿಸಿ ಆರೋಪಿಯನ್ನು ಬಂಧಿಸಿದೆ. ಮಂಜೇಶ್ವರಂ ಪೊಲೀಸರು ಅಬಿದ್ನನ್ನು ವಶಕ್ಕೆ ಪಡೆದು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.