ಉಡುಪಿ (ವಿಶ್ವ ಕನ್ನಡಿಗ ನ್ಯೂಸ್) : ಉಮ್ರಾ ನೆರವೇರಿಸಲು ಮಕ್ಕಾ – ಮದೀನಾಕ್ಕೆ ತೆರಳಿದ್ದ ಜಿಲ್ಲೆಯ ಕೋಟದ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯ ಮರಿಯಮ್ಮ (66) ಹಾಗು ಮಧುವನ ಅಚ್ಲಾಡಿಯ ಖತಿಜಮ್ಮ (68) ಮೃತಪಟ್ಟವರು.
23 ಮಹಿಳೆಯರು ಹಾಗೂ 11 ಪುರುಷರು ಸೇರಿದಂತೆ ಒಟ್ಟು 34 ಮಂದಿಯ ತಂಡವು ಅಲ್ ಸದೀಮ್ ಟೂರ್ಸ್ & ಟ್ರಾವೆಲ್ಸ್ ಮಂಗಳೂರು ಇವರ ಏಜೆನ್ಸಿಯಿಂದ ಮಾರ್ಚ್ 1ರಂದು ಮಂಗಳೂರಿನಿಂದ ಉಮ್ರಾ ನೆರವೇರಿಸಲು ಮಕ್ಕಾಕ್ಕೆ ಹೊರಟಿತ್ತು.
ತಂಡವು ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುವ ತಯಾರಿಯಲ್ಲಿ ಇದ್ದ ಸಂದರ್ಭದಲ್ಲಿ ಮರಿಯಮ್ಮ (66) ಮಾ. 9 ರಂದು ಗುರುವಾರ ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರು. ಎರಡು ದಿನಗಳ ಬಳಿಕ ಮಾರ್ಚ್ 11 ರಂದು ಶನಿವಾರ ಭಾರತದ ಕಾಲಮಾನ ಸಂಜೆ 3 ಗಂಟೆಗೆ ತಂಡದಲ್ಲಿ ಇದ್ದ ಇನ್ನೋರ್ವ ಮಹಿಳೆ ಖತಿಜಮ್ಮ (68) ಅನಾರೋಗ್ಯದಿಂದ ಮೃತಪಟ್ಟರು.
ಇಬ್ಬರ ಮೃತದೇಹವನ್ನು ಮಕ್ಕಾದಲ್ಲಿ ದಪನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೃತರು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.