ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಉಮ್ರಾ ಮುಗಿಸಿ ವಾಪಸಾಗುತ್ತಿದ್ದ ಕೇರಳದ ಮಹಿಳೆಯೊಬ್ಬರು ಜಿದ್ದಾ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೀರಾನ್ ಮುಹಮ್ಮದ್ ಅವರ ಪತ್ನಿ ಹಲೀಮಾ (65) ಮೃತಪಟ್ಟವರು. ಫೆಬ್ರವರಿ 28 ರಂದು ಅದ್ಮಾಲಿ ಅಕ್ಸಾ ಉಮ್ರಾ ಸೇವೆಯ ಅಡಿಯಲ್ಲಿ ಹಲೀಮಾ ಸೇರಿದಂತೆ ಗುಂಪು ತೆರಳಿತ್ತು.
ಊರಿಗೆ ವಾಪಸಾಗುತ್ತಿದ್ದ ವೇಳೆ ಅವರು ಜಿದ್ದಾ ವಿಮಾನ ನಿಲ್ದಾಣದಲ್ಲಿ ಅಸ್ವಸ್ಥರಾಗಿ ಕುಸಿದುಬಿದ್ದು ನಿಧನರಾದರು. ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.