ಚಿಂಚೋಳಿ (ವಿಶ್ವ ಕನ್ನಡಿಗ ನ್ಯೂಸ್) : ವಿದ್ಯುತ್ ಆಘಾತದಿಂದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪಟ್ಟಣದ ಧನಗರಗಲ್ಲಿಯಲ್ಲಿ ಸಂಭವಿಸಿದೆ. ತಾಯಿ ಝರಣಮ್ಮ ಅಂಬಣ್ಣ ಬಸಗೊಂಡ (೪೪) ಮತ್ತು ಇಬ್ಬರು ಮಕ್ಕಳಾದ ಮಹೇಶ ತಂದೆ ಅಂಬಣ್ಣ (೧೮ ), ಸುರೇಶ ಅಂಬಣ್ಣ (೧೬) ಅವರು ವಿದ್ಯುತ್ ಅವಘಡದಲ್ಲಿ ಮೃತರಾದವರು.
ಮೃತ ಝರಣಮ್ಮ ಪತಿ ಅಂಬಣ್ಣಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ನಿನ್ನೆ ಚಿಂಚೋಳಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಬಿರುಗಾಳಿಗೆ ಮನೆಯ ಮುಂದೆ ವಿದ್ಯುತ್ ಸರ್ವಿಸ್ ತಂತಿ ಕಡಿದು ನೀರಿನಲ್ಲಿ ಬಿದ್ದಿದೆ. ರಾತ್ರಿ ಒಂದು ಗಂಟೆ ಸುಮಾರಿಗೆ ದನಗಳಿಗೆ ಹಾಕುವ ಹೊಟ್ಟು ಮಳೆ ನೀರಿಗೆ ತೊಯ್ಯದಿರಲೆಂದು ಅದನ್ನು ತಾಡಪತ್ರಿಯಿಂದ ಮುಚ್ಚಲು ಹೋದಾಗ ವಿದ್ಯುತ್ ಸ್ಪರ್ಶವಾಗಿದೆ ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.