(www.vknews.in) : ಅಲ್ಪ ಸಂಖ್ಯಾತ ಸಮುದಾಯದ ಶೈಕ್ಷಣಿಕ ಸವಲತ್ತುಗಳಿಗೆ ಮೀಸಲು ಇರಿಸಿದ ಶೇಕಡಾ 4 ರ 2ಬಿ ಮೀಸಲಾತಿ ಯನ್ನು ರಾಜ್ಯ ಬಿಜೆಪಿ ಸರಕಾರ ರದ್ದುಗೊಳಿಸಿ ಇತರ ಸಮುದಾಯಕ್ಕೆ ನೀಡಿದ ಕ್ರಮ ಖಂಡನೀಯ. ಸಾಂವಿಧಾನಿಕವಾಗಿ ಚಾಲನೆಯಲ್ಲಿ ಇದ್ದ ಮುಸ್ಲಿಮ್ ಸಮುದಾಯದ 2ಬಿ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿರುವುದು ಮತೀಯ ತಾರತಮ್ಯ ಮತ್ತು ಸಮುದಾಯವನ್ನು ಶೈಕ್ಷಣಿಕ ಹಕ್ಕುಗಳಿಂದ ವಂಚಿಸುವ ಪ್ರಯತ್ನವಾಗಿದೆ.
ಮುಸ್ಲಿಮರ ಹಕ್ಕನ್ನು ಕಸಿದು ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಿಗೆ ಹಂಚಿರುವುದು ಅನ್ಯಾಯದ ಪರಮಾವಧಿ ಆಗಿದೆ. ರಾಜ್ಯ ಸರಕಾರ ತಕ್ಷಣ ಮುಸ್ಲಿಮ್ ಸಮುದಾಯದ ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ರಾಜ್ಯ ಸರಕಾರದ ಈ ನಡೆಯನ್ನು ಖಂಡಿಸಿ ಮಾರ್ಚ್ 31ರಂದು ಮಂಗಳೂರಿನ ಮಿನಿ ವಿಧಾನ ಸೌಧ ಬಳಿ ಪ್ರತಿಭಟನೆ ಹಮ್ಮಿ ಕೊಳ್ಳಲಿದೆ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.