ಮಂಗಳೂರು (www.vknews.in) : ರಾಜ್ಯ ಸಚಿವ ಸಂಪುಟವು ರಾಜ್ಯದಲ್ಲಿ 2ಬಿ ಪ್ರವರ್ಗದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ 4 ಶೇಖಡ ಮೀಸಲಾತಿಯನ್ನು ರದೂದುಪಡಿಸಿ ಪಂಚಮ ಶಾಲಿ ಲಿಂಗಾಯತರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಲು ಹುನ್ನಾರ ನಡೆಸಿರುವುದನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ.ಅಬ್ದುಲ್ ರಹಿಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಎಸ್.ಇ.ಕರೀಂ ಜಂಟಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ರಾಜ್ಯ ಸಂಪುಟದ ಈ ತೀರ್ಮಾನವು ಕಾನೂನುಬಾಹಿರ ಮತ್ತು ಚುನಾವಣಾ ತಂತ್ರವೆಂದು ಆಪಾಸಿದರು.
ದೇಶದ ಪ್ರತಿಪಕ್ಷದ ಧ್ವನಿಯನ್ನು ಅಡಗಿಸಲು ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಉಚ್ಚಾಟಿಸಿರುವ ಕೇಂದ್ರದ ಬಿ.ಜೆ.ಪಿ ಸರ್ಕಾರದ ಪ್ರಜಾಪ್ರಭುತ್ವ ಹತ್ಯೆಯ ದಿಕ್ಕಿನಲ್ಲೇ ರಾಜ್ಯ ಸರ್ಕಾರವು ಸಾಗುತ್ತಿದ್ದು ಮೀಸಲಾತಿ ಬಗೆಗಿನ ತೀರ್ಮಾನವು ಹುಚ್ಚುತನದ ಪರಮಾವಧಿಯೆಂದರು.
ರಾಜ್ಯದಲ್ಲಿ ಇದುವರೆಗಿನ ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳ ವರದಿಯಲ್ಲೂ ಕೂಡ ವೈಜ್ಞಾನಿಕವಾಗಿ ಅದ್ಯನ ಮಾಡಿ ಮುಸ್ಲಿಮರು ಹಿಂದುಳಿದವರೆಂದು ಗುರುತಿಸಿರುವ ಕಾರಣ ಮುಸ್ಲಿಮರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದ್ದು ಅಲ್ಲದೆ ಬರೀ ಧಾರ್ಮಿಕ ಅಲ್ಪಸಂಖ್ಯಾತರೆಂಬ ಕಾರಣದಿಂದ ಮೀಸಲಾತಿ ನೀಡಿಲ್ಲ.ರಾಜ್ಯ ಜನಸಂಖ್ಯೆಯ 15 ಶೇಖಡವಿರುವ ಮುಸ್ಲಿಮರಿಗೆ ಬರೀ 4 ಶೇಖಡ ಮೀಸಲಾತಿಯನ್ನು ನೀಡಲಾಗುತ್ತಿದ್ದುಅದನ್ನೂ ಕೂಡ ಕಸಿದು ಕೊಳ್ಳುವ ಈ ತೀರ್ಮಾನ ನಾಡಿನ ಮುಸ್ಲಿಮರನ್ನು ಸಮಾಜದ ಮುಖ್ಯವಾನಿಯಿಂದ ದೂರವಿಡುವ ಹುನ್ನಾರದ ಭಾಗವೆಂದು ಅವರು ಆಪಾದಿಸಿದರು.
ಈಗಾಗಲೇ ಸರ್ಕಾರದ ಕೈ ಸೇರಿರುವ ಕಾಂತರಾಜ ಆಯೋಗದಜಾತಿಗಣತಿ ವರದಿಯನ್ನು ಬಹಿರಂಗಪಡಿಸಿ ಅದರಂತೆ ಮೀಸಲಾತಿಮರು ವಿಂಗಡಣೆಗೆ ಸರ್ಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.