ಹೊಸದಿಲ್ಲಿ (ವಿಶ್ವ ಕನ್ನಡಿಗ ನ್ಯೂಸ್) : ಈ ಮೊದಲು, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2023 ಆಗಿತ್ತು. ಮಂಗಳವಾರದ ಅಧಿಸೂಚನೆಯಲ್ಲಿ, ಜುಲೈ 1, 2023 ರಿಂದ, ಎಲ್ಲಾ ಲಿಂಕ್ ಮಾಡದ ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳುತ್ತವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆಧಾರ್-ಪಾನ್ ಜೋಡಣೆಯ ಕೊನೆಯ ದಿನಾಂಕವನ್ನು ಜೂನ್ 30 ಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿದೆ.
ಜೂನ್ 30, 2023 ರವರೆಗೆ ಪ್ಯಾನ್ ಕಾರ್ಡ್ಗಳನ್ನು ಆಧಾರ್ ಕಾರ್ಡ್ಗಳಿಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. ಅಲ್ಲದೇ, ಗಡುವಿನ ನಂತರವೂ ಆಧಾರ-ಪ್ಯಾನ್ ಜೋಡಣೆಯಾಗದೇ ಇದ್ದಲ್ಲಿ ಅಂತಹ ಪಾನ್ ಕಾರ್ಡ್ಗಳನ್ನು ಹೊಂದಿದವರಿಗೆ ತೆರಿಗೆ ರಿಫಂಡ್ ಅನುಮತಿಸಲಾಗುವುದಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ನಂತರ ತೆರಿಗೆದಾರರೊಬ್ಬರು ಆಧಾರ್ ಮತ್ತು ಪ್ಯಾನ್ ಜೋಡಿಸಿದರೆ, ಲಿಂಕ್ ಮಾಡದ ಅವಧಿಯ ರಿಫಂಡ್ ಮೇಲಿನ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆ ಒದಗಿಸುವುದಿಲ್ಲ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.