ಕಣಚೂರು ಮೋನು, ಮುಟ್ಟಿದ್ದೆಲ್ಲಾ ಜೇನು..
(www.vknews.in) ; ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ|ಹಾಜಿ ಯು.ಕೆ.ಮೋನು ರವರಿಗೆ ಹುಟ್ಟೂರ ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಸಿಟಿ ಗ್ರೌಂಡಿನಲ್ಲಿ ಗೌರವಾನ್ವಿತ ಶಾಸಕರಾದ ಯು ಟಿ ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಡೆದು ಬಂದ ದಾರಿಯನ್ನು ಮರೆಯದೆ ಮುಂದೆ ಸಾಗಿದರೆ ಏನಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಕಣಚೂರು ಮೋನಾಕನವರು ಮೂಡಿಗೆರೆ ತಾಲೂಕಿನ ಕಣಚೂರು ಎಂಬ ಪುಟ್ಟ ಗ್ರಾಮದಲ್ಲಿ ತನ್ನ ಉದ್ಯಮ ರಂಗವನ್ನು ಆರಂಭಿಸಿ ನಂತರ ತನ್ನ ಎಲ್ಲಾ ಉದ್ಯಮ ರಂಗಕ್ಕೂ ಆ ಪುಟ್ಟ ಗ್ರಾಮದ ಹೆಸರನ್ನು ಸೇರಿಸಲು ಮರೆಯದ ಶ್ರೀಯುತರು ದೇಶದ ಗಡಿ ದಾಟಿ ದುಬೈ,ಸಿಂಗಾಪುರ, ಮಲೇಶಿಯಾ, ಬ್ರೆಝಿಲ್,ಆಫ್ರಿಕಾ ಮುಂತಾದ ಕಡೆಗಳಲ್ಲಿ ತನ್ನ ಉದ್ಯಮದ ಸಾಮ್ರಾಜ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ ಮೋನಾಕನವರು ಆ ಪುಟ್ಟ ಗ್ರಾಮವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಬಾಲ್ಯದಿಂದಲೇ ಸ್ವತಂತ್ರ ದುಡಿಮೆ ಚಳ ಸತತ ಪ್ರಯತ್ನದಿಂದ ಮುಂದೆ ಸಾಗಿ ಉದ್ಯಮ ರಂಗಗಳಲ್ಲಿ ಮಾತ್ರವಲ್ಲ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ನೂರಾರು ಬಡ ಕುಟುಂಬದ ಅನ್ನದಾತರಾಗಿದ್ದಾರೆ.
ತಾನು ನಾಲ್ಕನೇ ತರಗತಿಯವನಾದರೂ ಕೂಡಾ ತನ್ನ ಮಕ್ಕಳನ್ನು ಮೊಮ್ಮಕ್ಕಳನ್ನು ಅತ್ಯುನ್ನತ ವಿದ್ಯಾವಂತರಾಗಿಸಿದ್ದಾರೆ ಮಾತ್ರವಲ್ಲ ಸಹಸ್ರ ಸಹಸ್ರ ಪಾಮರ ಹೃದಯಗಳು ಅರಿವಿಗಾಗಿ ದಾಹಿಸುವಾಗ ಅರಿವಿನ ನೀರನ್ನು ಚೆಲ್ಲಲು ಕಣಚೂರು ಪಬ್ಲಿಕ್ ಸ್ಕೂಲ್, ಕಣಚೂರು ಮೆಡಿಕಲ್ ಕಾಲೇಜು ಮುಂತಾದ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿ ಶ್ರೀಯುತರು ತಾನೊಬ್ಬ ವಿದ್ಯೆ ಪ್ರೇಮಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಕಣಚೂರು ಮೋನಾಕರವರಿಗೆ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಅವರ ಅರ್ಹತೆ ಸಿಕ್ಕಿದ ಗೌರವವಾಗಿದೆ. ಇನ್ನೂ ಮುಂದೆಯೂ ಹಲವಾರು ಅತ್ಯುನ್ನತ ಗೌರವ ಲಭಿಸಿಗುವಂತಾಗಲಿ.
–ತಬೂಕ್ ದಾರಿಮಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.