ಮನಿಲಾ (ವಿಶ್ವ ಕನ್ನಡಿಗ ನ್ಯೂಸ್) ; ಭಾರತದ ಪಂಜಾಬ್ ಮೂಲದ ದಂಪತಿಯನ್ನು ಫಿಲಿಪೈನ್ಸ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸುಖ್ ವಿಂದರ್ಸಿಂಗ್ ಮತ್ತು ಕಿರಣ್ದೀಪ್ ಕೌರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ. ದೃಶ್ಯಾವಳಿಯಲ್ಲಿ, ಅಪರಿಚಿತರು ಮನೆಗೆ ಪ್ರವೇಶಿಸುತ್ತಾರೆ ಮತ್ತು ಕಿರಣ್ ದೀಪ್ ಕೌರ್ ಅವರನ್ನು ಬಂದೂಕು ತೋರಿಸಿ ಸುಖ್ವಿಂದರ್ ಸಿಂಗ್ಗೆ ಗುಂಡು ಹಾರಿಸಿದ್ದಾರೆ. ಸುಖ್ ವಿಂದರ್ ಸಿಂಗ್ಗೆ ಒಂದಕ್ಕಿಂತ ಹೆಚ್ಚು ಬಾರಿ ಶೂಟ್ ಮಾಡುತ್ತಿರುವುದು ಕಾಣಿಸುತ್ತದೆ.
ಸುಖ್ವಿಂದರ್ ಸಿಂಗ್ ಕಳೆದ 19 ವರ್ಷಗಳಿಂದ ಮನಿಲಾದಲ್ಲಿ ಹಣಕಾಸು ವಹಿವಾಟು ನಡೆಸುತ್ತಿದ್ದಾರೆ. ಅವರ ಸಹೋದರ ಲಖ್ವೀರ್ ಸಿಂಗ್ ಕೂಡ ಮನಿಲಾದಲ್ಲಿ ವಾಸಿಸುತ್ತಿದ್ದಾರೆ. ಸುಖ್ ವಿಂದರ್ ಸಿಂಗ್ ಮೂರು ವರ್ಷಗಳ ಹಿಂದೆ ವಿವಾಹವಾದರು. ನಂತರ ಅವರು ತಮ್ಮ ಪತ್ನಿ ಕಿರಣ್ದೀಪ್ ಕೌರ್ ಅವರನ್ನು ಮನಿಲಾಗೆ ಕರೆದೊಯ್ದರು. ಲಖ್ವೀರ್ ಸಿಂಗ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾಗ ಆತನ ಸಹೋದರ ಹತ್ಯೆಯಾಗಿದ್ದಾರೆ.
ತನ್ನ ಸಹೋದರನಿಗೆ ಹಲವಾರು ಬಾರಿ ಕರೆ ಮಾಡಿದರೂ ಸಿಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಹುಡುಕುವಂತೆ ಚಿಕ್ಕಪ್ಪನಿಗೆ ಕೇಳಿಕೊಂಡೆ ಎಂದು ಲಖ್ವೀರ್ ಸಿಂಗ್ ಹೇಳುತ್ತಾರೆ. ಚಿಕ್ಕಪ್ಪ ಮನೆಗೆ ಬಂದು ತನಿಖೆ ನಡೆಸಿದಾಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು. ಕುಟುಂಬಕ್ಕೆ ಯಾವುದೇ ರೀತಿಯ ಶತ್ರುಗಳಿಲ್ಲ ಎಂದು ಲಖ್ವೀರ್ ಸಿಂಗ್ ಹೇಳುತ್ತಾರೆ.
ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಫಿಲಿಪ್ಪೀನ್ಸ್ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಲಖ್ವೀರ್ ಸಿಂಗ್ ಭಾರತ ಸರ್ಕಾರವನ್ನು ಕೋರಿದರು. ಸುಖ್ವಿಂದರ್ ಸಿಂಗ್ ಅವರ ದೇಹದಲ್ಲಿ ಹಲವು ಗುಂಡಿನ ಗಾಯಗಲಿದೆ ಎಂದು ತನಿಖೆ ವೇಳೆ ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.