ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿ ಐಫೋನ್ ಮತ್ತು ಬೈಕ್ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ತಿಪಡ್ಪು ಮೂಲದ ಜಾಕೀರ್ ಹುಸೈನ್ (27), ಸೋಮೇಶ್ವರ ಗ್ರಾಮದ ಪಿಲಾರ್ ನಿವಾಸಿ ಮುಹಮ್ಮದ್ ಉಬೈದುಲ್ಲಾ (33), ಉಳ್ಳಾಲದ ಮೇಲಂಗಡಿ ನಿವಾಸಿ ಇಬ್ರಾಹಿಂ ಖಲೀಲ್ (22) ಎಂಬುವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ, ಉಚ್ಚಿಲ ಎನ್ಎಚ್ 66 ರ ಜಿಯೋ ಪೆಟ್ರೋಲ್ ಪಂಪ್ ಬಳಿ ದಂಪತಿಗಳು ಬೈಕ್ನಲ್ಲಿ ಹೋಗುತ್ತಿದ್ದಾಗ ಸ್ಕೂಟರ್ನಲ್ಲಿ ಬಂದ ಮೂವರು ವ್ಯಕ್ತಿಗಳು ದಂಪತಿಗಳ ಮೇಲೆ ದಾಳಿ ಮಾಡಿ ಬೈಕ್ ಕದ್ದಿದ್ದಾರೆ. ಈ ಗ್ಯಾಂಗ್ ಮಹಿಳೆಯ ಬಳಿಯಿದ್ದ ಐಫೋನ್ ಅನ್ನು ಕೂಡ ಕದ್ದೊಯ್ದಿದೆ. ಘಟನೆ ಕುರಿತು ಬೈಕ್ ಸವಾರ ಅಬ್ದುಲ್ಲಾ ಉಳ್ಳಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದರೋಡೆಗೆ ಬಳಸಿದ್ದ ಎರಡು ಸ್ಕೂಟರ್, ಐಫೋನ್ ಹ್ಯಾಂಡ್ ಸೆಟ್ ಮತ್ತು ಯಮಹಾ ಮೋಟಾರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.