ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) | ಲುಲು ಗ್ರೂಪ್ ಅಧ್ಯಕ್ಷ ಎಂ.ಎ.ಯೂಸುಫ್ ಅಲಿ ಅವರು ಯುಎಇಗೆ ಹೊಸದಾಗಿ ನೇಮಕಗೊಂಡ ಆಡಳಿತಗಾರರನ್ನು ಅಭಿನಂದಿಸಿದರು. ಯುಎಇ ಉಪಾಧ್ಯಕ್ಷರಾಗಿ ನೇಮಕಗೊಂಡ ಶೇಖ್ ಮನ್ಸೂರ್ ಬಿನ್ ಜಾಯೆದ್ ಅಲ್ ನಹ್ಯಾನ್, ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಅಬುಧಾಬಿಯ ಉಪ ಆಡಳಿತಗಾರರಾಗಿ ನೇಮಕಗೊಂಡ ಶೇಖ್ ಹಸ್ಸಾ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಘನತೆವೆತ್ತ ಶೇಖ್ ತನೂನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಅವರು ಅಭಿನಂದಿಸಿದರು.
ಹೊಸದಾಗಿ ನೇಮಕಗೊಂಡ ಆಡಳಿತಗಾರರು ಯುಎಇಗೆ ಆಸ್ತಿಯಾಗುತ್ತಾರೆ ಮತ್ತು ದೇಶದ ಮುನ್ನಡೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎಂದು ಯೂಸುಫ್ ಅಲಿ ಹೇಳಿದರು. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ದೂರದೃಷ್ಟಿಯ ಕ್ರಮಗಳು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿವೆ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.