ಮಂಗಳೂರು (www.vknews.in) : ಪವಿತ್ರ ರಂಝನ್ ತಿಂಗಳ 11 ರಾತ್ರಿ 10.00 ರಿಂದ 2.30 ರವರೆಗೆ ಮಂಗಳೂರು ಪಡೀಲ್ ಮಸ್ಜಿದ್ರರಹ್ಮಾನ್ ನಲ್ಲಿ SჄS ಸುತ್ತೋಲೆ ಪ್ರಕಾರ ರಂಝಾನ್ ಇನಾರ ನೈಟ್ ಕಾರ್ಯಕ್ರಮ ವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ,SჄS,SSF ಎಲ್ಲಾ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಬಹಳ ಸುಂದರವಾಗಿ ನಡೆಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ದುಆದೊಂದಿಗೆ SჄS ಮಂಗಳೂರು ಝೋನ್ ಅಧ್ಯಕ್ಷ ಸತ್ತಾರ್ ಸಖಾಫಿ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪ್ರ ಕಾರ್ಯದರ್ಶಿ ನಝೀರ್ ಲುಲು ಸ್ವಾಗತಿಸಿದರು. ಸಂಘಟನಾ ವಿಷಯದಲ್ಲಿ ಮನ ಮುಟ್ಟುವಂತೆ ಜಿಲ್ಲಾ SჄS ನಾಯಕ ಯಾಕುಬ್ ಸ ಅದಿ ನಾವೂರು ವಿಷಯ ಮಂಡಿಸಿದರು.
ಸಂಘಟನಾ ಅನುಭವದ ಕುರಿತು ಮಾತಾಡಿದ ರಾಜ್ಯ ಮುಸ್ಲಿಂ ಜಮಾಅತ್ ನಾಯಕ ಅಶ್ರಫ್ ಕಿನಾರ ಮಂಗಳೂರು , ಆತ್ಮೀಯ ಸಂಘಟನಾ ತರಗತಿ SჄS ಜಿಲ್ಲಾ ಉಪಾಧ್ಯಕ್ಷ ಬಷೀರ್ ಮದನಿ ಕುಳೂರು,ಆತ್ಮೀಯ ಮಜ್ಲಿಸ್ ನೇತೃತ್ವ ಎಸ್ ಎಸ್ ಎಫ್ ನಾಯಕರಾದ ಮನ್ಸೂರ್ ಮದನಿ ವಳವೂರು , ಖತೀಬ್ ಬಷೀರ್ ಅಹ್ಸನಿ ದುಆದೊಂದಿಗೆ ಸಮಾಪ್ತಿಯಾಯಿತು.
ಕಾರ್ಯಕ್ರಮ ದಲ್ಲಿ ಸುನ್ನಿ ಸಂಘ ಕುಟುಂಬದ ಇಸ್ಹಾಕ್ ತಂಙಲ್ ಕಣ್ಣೂರು, ಸಲೀಂ ಹಾಜಿ ಅಡ್ಯಾರ್ ಪದವು, ಎ ಪಿ ಇಸ್ಮಾಹಿಲ್ ಅಡ್ಯಾರ್ ಪದವು, ನವಾಝ್ ಸಖಾಫಿ, ಅಬ್ಬಾಸ್ ಹಾಜಿ ಬಿಜೈ, ಕೆ ಸಿ ಎಣ್ಮೂರು, ಹಸನ್ ಪಾಂಡೇಶ್ವರ , ಜಬ್ಬಾರ್ ಕಣ್ಣೂರು, ಅಬ್ದುಲ್ ಕಾದರ್ ಕಾವೂರು,ಹಾಗೂ ಜಿಲ್ಲಾ, ಝೋನ್ ,ಸರ್ಕಲ್, ಯುನಿಟ್ ಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.