(www.vknews.in) ; 2023 ರ ಚುನಾವಣೆಯಲ್ಲಿ ಕುತೂಹಲ ಮೂಡಿಸುತ್ತಿರುವ ಕ್ಷೇತ್ರವಾಗಿದೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ. ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕಭರತ್ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿಕಣಕ್ಕಿಳಿಸುವುದು ಸ್ಪಷ್ಟವಾಗಿದೆ .ಕಾಂಗ್ರೆಸ್ ನಲ್ಲಿ ಮೊಯಿದ್ದೀನ್ ಬಾವ ಮತ್ತು ಇನಾಯತ್ ಅಲಿ ನಡುವೆ ಸೀಟ್ ಗಾಗಿ ಕಾಳಗವಿದ್ದರೂ ಇನಾಯತ್ ಅಲಿಯವರಿಗೆ ಸೀಟು ಫೈನಲ್ ಆಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ದೊರೆಯುತ್ತಿದೆ.
ಇದೇ ಸಂದರ್ಭದಲ್ಲಿ ಜನ ಅತೀ ಕುತೂಹಲದಿಂದ ಕಾಯುತ್ತಿದ್ದದ್ದು ಎಸ್ಡಿಪಿಐ ನಡೆಯನ್ನಾಗಿದೆ. ಆದರೆ ವಿಶ್ವಾಸನೀಯ ಮೂಲಗಳ ಪ್ರಕಾರ ಈ ವಾರದೊಳಗೆ ಎಸ್ಡಿಪಿಐ ಕೂಡ ತನ್ನ ಅಭ್ಯರ್ಥಿಯನ್ನು ಮೂರನೇ ಪಟ್ಟಿಯಲ್ಲಿ ಬಿಡುಗಡೆಗೊಳಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮುಖ್ಯವಾಗಿ ರಾಜ್ಯ ಕಾರ್ಯದರ್ಶಿ ಯುವ ರಾಜಕಾರಣಿ ಅಶ್ರಫ್ ಮಾಚಾರ್, ಮಾಜಿ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೆಸರು ಕೇಳಿ ಬರುತ್ತಿದೆ. ಒಂದು ವೇಳೆ ಎಸ್ಡಿಪಿಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆಲುವು ಕಬ್ಬಿಣದ ಕಡಲೆಕಾಯಿ ಆಗಲಿದೆ ಎಂದಾಗಿದೆ ರಾಜಕೀಯ ತಜ್ಞರ ಅಭಿಪ್ರಾಯ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.